ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಅಕ್ರಮ ಮರಳು ಅಡ್ಡೆಗೆ ದಾಳಿ: 30 ಲಾರಿ, 20 ದೋಣಿಗಳು ವಶಕ್ಕೆ

|
Google Oneindia Kannada News

ಮಂಗಳೂರು, ಜನವರಿ 15: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಮೇಲೆ ದಾಳಿ ಮುಂದುವರೆದಿದೆ. ಇಂದು ಬೆಳ್ಳಂಬೆಳಗ್ಗೆ ಮಂಗಳೂರು ಹೊರವಲಯದ ಅಕ್ರಮ ಮರಳು ಸಂಗ್ರಹ ಘಟಕಗಳ ಮೇಲೆ ಪೊಲೀಸರ ತಂಡ ದಾಳಿ ನಡೆಸಿದೆ.

ಅಕ್ರಮ ಮರಳುಗಾರಿಕೆ: ಮಂಗಳೂರು ಹೊರವಲಯದಲ್ಲಿ 12ಕ್ಕೂ ಅಧಿಕ ಬೋಟ್ ವಶಅಕ್ರಮ ಮರಳುಗಾರಿಕೆ: ಮಂಗಳೂರು ಹೊರವಲಯದಲ್ಲಿ 12ಕ್ಕೂ ಅಧಿಕ ಬೋಟ್ ವಶ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು, ಮುತ್ತೂರು, ಮಳಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳವು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀ ಶ್ರೀನಿವಾಸ ಗೌಡ ರವರ ನೇತೃತ್ವದಲ್ಲಿ ದಾಳಿ ನಡೆಸಿದೆ.

ಕೋಟ್ಯಾಂತರ ರೂ.ಮೌಲ್ಯದ ಮರಳು ವಶಪಡಿಸಿಕೊಂಡ ಪೊಲೀಸರುಕೋಟ್ಯಾಂತರ ರೂ.ಮೌಲ್ಯದ ಮರಳು ವಶಪಡಿಸಿಕೊಂಡ ಪೊಲೀಸರು

Police raided illegal sand extraction in Mangalore

ಈ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ಮಾಡಿ, ಅಪಾರ ಪ್ರಮಾಣದ ಮರಳು, ಅಕ್ರಮ ಮರಳು ಸಾಗಾಟಕ್ಕೆ ಬಳಸಲಾಗುತ್ತಿದ್ದ 30 ಲಾರಿಗಳು, 20 ಕ್ಕೂ ಹೆಚ್ಚು ಬೋಟ್ ಗಳನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ಲಾರಿ, ಬೋಟ್ ಹಾಗೂ ಅಪಾರ ಪ್ರಮಾಣದ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

English summary
Mangaluru police today morning raided illegal sand extraction unit in Ganji matta, Adduru, Muthuru, Malali and seized 30 lorries and 20 boats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X