ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ನರೇಶ್ ಶೆಣೈ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 07 : ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಬಂಧಿಸಬೇಕು ಎಂದು ದೇಶಪ್ರೇಮಿಗಳ ಸಂಘಟನೆ ಒತ್ತಾಯಿಸಿದೆ. ಆರೋಪಿ ಬಂಧನಕ್ಕೆ ಒತ್ತಡ ಹೇರಲು ಶಾಸಕ ಜೆ.ಆರ್.ಲೋಬೋ ಮನೆಮುಂದೆ ಪ್ರತಿಭಟನೆ ನಡೆಸಲು ಯತ್ನಿಸಿದ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ದೇಶಪ್ರೇಮಿಗಳ ಸಂಘಟನೆಯ ವತಿಯಿಂದ ಸೋಮವಾರ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರ ಮನೆ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಲ್ಮಠದ ಕಲೆಕ್ಟರ್ಸ್‌ ಗೇಟ್ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ಶಿವಭಾಗ್‌ನಲ್ಲಿ ಕದ್ರಿ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸಿ, ಶಾಸಕರ ಮನೆ ಬಳಿ ಹೋಗದಂತೆ ತಡೆದರು. ['ನಮೋ ಬ್ರಿಗೇಡ್' ಹುಟ್ಟಿದ್ದು ಬೆಳೆದಿದ್ದು ಹೇಗೆ?]

Vinayak Baliga

ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲ ಭಾರತ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು, 'ವಿನಾಯಕ್ ಬಾಳಿಗ ಹತ್ಯೆ ಆರೋಪಿಯನ್ನು ಬಂಧಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಹತ್ಯೆಯ ಹಿಂದೆ ನರೇಶ್ ಶೆಣೈ ಮಾತ್ರವಲ್ಲದೆ ಇನ್ನು ಹಲವಾರು ಇದ್ದಾರೆ ಎನ್ನುವ ಮಾಹಿತಿ ಇದೆ. ತನಿಖೆಯಿಂದ ಇವೆಲ್ಲವೂ ಬಯಲಾಗಬೇಕು' ಎಂದರು.

ಡಿವೈಎಫ್ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, 'ಬಾಳಿಗ ಹತ್ಯೆ ನಡೆದು ಎರಡೂವರೆ ತಿಂಗಳಾದರೂ ಪೊಲೀಸರು ಆರೋಪಿ ನರೇಶ್ ಶೆಣೈಯನ್ನು ಬಂಧಿಸಲು ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ತನಿಖೆಯ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರ ಹತ್ಯೆ ಆರೋಪಿಯ ರಕ್ಷಣೆಗೆ ನಿಂತು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ' ಎಂದು ದೂರಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿನಾಯಕ್ ಬಾಳಿಗ ಸಹೋದರಿ ಉಷಾ ಶೆಣೈ ಅವರು, 'ಹತ್ಯೆಯಾದ ಸಂದರ್ಭದಲ್ಲಿ ಸಂತಾಪ ಸೂಚಿಸಲು ಬಂದಿದ್ದ ಶಾಸಕರು ನ್ಯಾಯ ಕೊಡುವ ಭರವಸೆ ನೀಡಿದ್ದರು. ಆದರೆ, ಅಣ್ಣನ ಕೊಲೆ ಮಾಡಿದವರನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ' ಎಂದು ಹೇಳಿದರು.

ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಅವರನ್ನು ಮಾರ್ಚ್‌ನಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣದಲ್ಲಿ ಯುವ ಬ್ರಿಗೇಡ್ ಸಂಚಾಲಕ ನರೇಶ್ ಶೆಣೈ ಅವರು ಪ್ರಮುಖ ಆರೋಪಿಯಾಗಿದ್ದಾರೆ.

English summary
The protesters including the family member of late Vinayak Baliga who tried to protest in front of Mangaluru south MLA JR Lobo's house were arrested and released on Monay, June 6, 2016. Protesters demanding for Naresh Shenoy's arrest who was accused in Vinayak Baliga murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X