ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಕ್ ದೇಹ ಗೌಪ್ಯವಾಗಿ ಮನೆಗೆ ಶಿಫ್ಟ್, ಶವಯಾತ್ರೆಗೆ ಬಿಗಿಪಟ್ಟು

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ದೀಪಕ್ ರಾವ್ ಶವಯಾತ್ರೆಗೆ ಬಿಗಿಪಟ್ಟು , ಸ್ಥಳದಲ್ಲಿ ಉದ್ವಿಗ್ನ ವಾತಾವರಣ | Oneindia Kannada

ಮಂಗಳೂರು, ಜನವರಿ 04: ಮಂಗಳೂರಿನ ಕಾಟಿಪಳ್ಳದಲ್ಲಿ ನಿನ್ನೆ (ಜನವರಿ 3) ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಶವಯಾತ್ರೆಗೆ ಬಿಜೆಪಿ ಹಾಗು ಹಿಂದೂ ಸಂಘಟನೆಗಳ ಕಾರ್ಯಕರ್ತರು ನಡೆಸಿದ್ದ ಸಿದ್ದತೆಗೆ ಪೊಲೀಸರು ತಡೆದಿದ್ದಾರೆ

ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

ದೀಪಕ್ ರಾವ್ ಮೃತ ದೇಹವನ್ನು ಯಾವುದೇ ಸದ್ದಿಲ್ಲದೇ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿರುವ ಅವರ ಮನೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಬಿಜೆಪಿ ಹಾಗು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದು, ದೀಪಕ್ ರಾವ್ ಅವರ ಮೃತ ದೇಹದ ಶವಯಾತ್ರೆಗೆ ಪಟ್ಟು ಹಿಡಿದಿದ್ದಾರೆ.

ದೀಪಕ್ ಹತ್ಯೆ: ಮಂಗಳೂರಿಗೆ ಎಡಿಜಿಪಿ ಕಮಲ್‌ ಪಂತ್ ದೌಡು, ಬಿಗಿ ಬಂದೋಬಸ್ತ್ ದೀಪಕ್ ಹತ್ಯೆ: ಮಂಗಳೂರಿಗೆ ಎಡಿಜಿಪಿ ಕಮಲ್‌ ಪಂತ್ ದೌಡು, ಬಿಗಿ ಬಂದೋಬಸ್ತ್

ದೀಪಕ್ ರಾವ್ ಅವರ ಮೃತ ದೇಹದ ಶವಯಾತ್ರೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸುರತ್ಕಲ್, ಕಾಟಿಪಳ್ಳ ಪರಿಸರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿಯ ಹೊರತಾಗಿಯೂ ಶವಯಾತ್ರೆಗೆ ಸಿದ್ಧತೆ ನಡೆಸಲಾಗಿತ್ತು.

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಮಂಗಳೂರಿನ ಎ.ಜೆ ಆಸ್ಪತ್ರೆ ಮುಂಭಾಗದಲ್ಲಿ ಕಾರ್ಯಕರ್ತರು ಜಮಾವಣೆಗೊಂಡು ಮುಂಜಾನೆ 10 ಗಂಟೆ ವೇಳೆಗೆ ಮಂಗಳೂರಿನಿಂದ ಕಾಟಿಪಳ್ಳದ ವರೆಗೆ ಶವಯಾತ್ರೆಗೆ ಯೋಜನೆ ರೂಪಿಸಲಾಗಿತ್ತು.

 ಬಿಗಿ ಪೊಲೀಸ್ ಬಂದೋಬಸ್ತ್

ಬಿಗಿ ಪೊಲೀಸ್ ಬಂದೋಬಸ್ತ್

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಗೆ ಕ್ರಮ ಕೈಗೊಳ್ಳಲಾಗಿದೆ. ಬಂದೋದಸ್ತಗೆ 5 ಕೆಎಸ್ ಆರ್ ಪಿ, 6 ಸಿಎಆರ್ ತುಕಡಿ, 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಗೊಳಿಸಲಾಗಿದೆ.

ಮಂಗಳೂರು: ಪರಾರಿಯಾಗಲು ಯತ್ನಿಸಿದ ದೀಪಕ್ ಹಂತಕರ ಮೇಲೆ ಗುಂಡಿನ ದಾಳಿ ಮಂಗಳೂರು: ಪರಾರಿಯಾಗಲು ಯತ್ನಿಸಿದ ದೀಪಕ್ ಹಂತಕರ ಮೇಲೆ ಗುಂಡಿನ ದಾಳಿ

ಸುರತ್ಕಲ್, ಕಾಟಿಪಳ್ಳ ಬಂದ್

ಸುರತ್ಕಲ್, ಕಾಟಿಪಳ್ಳ ಬಂದ್

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್, ಕಾಟಿಪಳ್ಳದಲ್ಲಿ ಸ್ವಯಂ ಘೋಷಿತ ಬಂದ್ ಗೆ ಹಿಂದೂ ಜಾಗರಣ ವೇದಿಕೆ, ಬಜರಂಗದಳ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್, ವಾಹನ ಸಂಚಾರ ಪೂರ್ತಿ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟು ಮುಚ್ಚಿವೆ.

ಗೃಹ ಸಚಿವರು ಬರುವಂತೆ ಗ್ರಾಮಸ್ಥರ ಆಗ್ರಹ

ಗೃಹ ಸಚಿವರು ಬರುವಂತೆ ಗ್ರಾಮಸ್ಥರ ಆಗ್ರಹ

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡಲೇ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ದೀಪಕ್ ಮೃತ ದೇಹವನ್ನು ಅಂಬ್ಯುಲೆನ್ಸ್ ನಿಂದ ಕೆಳಗಿಳಿಸಲು ಬಿಡಲ್ಲವೆಂದು ಗ್ರಾಮಸ್ಥರು ಹಾಗೂ ದೀಪಕ್ ಪೋಷಕರು ಬಿಗಿಪಟ್ಟು ಹಿಡಿದಿದ್ದಾರೆ.

ಎಸ್ ಪಿ ಟಿ ಆರ್ ಸುರೇಶ್ ಮೊಕ್ಕಾಂ

ಎಸ್ ಪಿ ಟಿ ಆರ್ ಸುರೇಶ್ ಮೊಕ್ಕಾಂ

ದೀಪಕ್ ಕೊಲೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಎಡಿಜಿಪಿ ಕಮಲ್ ಪಂತ್, ಪೊಲೀಸ್ ಕಮೀಷನರ್ ಟಿ ಆರ್ ಸುರೇಶ್ ಮೊಕ್ಕಾಂ ಹೂಡಿದ್ದಾರೆ.

English summary
Reports which came in on Thursday morning said that the police, who denied permission to hold funeral procession, shifted the body of Deepak to Katipalla without bringing it to the knowledge of anyone. This was done in view of security and safety concerns. However, the police earned the ire of activists of BJP and Hindu organizations who had planned to hold funeral procession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X