ವಾರದಲ್ಲಿ 127 ಗೂಂಡಾಗಳಿಂದ ಬಾಂಡ್ ಪಡೆದ ಮಂಗಳೂರು ಪೊಲೀಸರು

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ನವೆಂಬರ್ 08, ಮಂಗಳೂರು : ಟಿಪ್ಪು ಜಯಂತಿ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರದಲ್ಲಿ 127 ಗೂಂಡಾಗಳಿಂದ ಭದ್ರತಾ ಬಾಂಡ್ ಪಡೆದಿದ್ದಾರೆ ಮಂಗಳೂರು ಪೊಲೀಸರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಈ ವಿಷಯ ತಿಳಿಸಿದರು.

Police collects bonds from 127 goons in Mangalore

ಟಿಪ್ಪು ಜಯಂತಿ ಹಿನ್ನೆಲಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಭದ್ರತಾ ಕಾರ್ಯಕ್ಕೆ 2,000 ಪೊಲೀಸರನ್ನು ಪೊಲೀಸರನ್ನು ನಿಯೋಜಿಸಲಾಗಿದೆ, ಇದರ ಜೊತೆಗೆ ರಾಜ್ಯ ಮೀಸಲು ಪೊಲೀಸ್ ಪಡೆಯ 13 ತುಕಡಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪನಿ ನಗರದಲ್ಲಿ ನಿಯೋಜಿಸಲಾಗಿದೆ.

ಬಿಜೆಪಿಯ ಪರಿವರ್ತನಾ ಸಮಾವೇಶಗಳ ಮೇಲೂ ಪೊಲೀಸರ ಅನುಮಾನದ ದೃಷ್ಠಿ ಬಿದ್ದಿದ್ದು. ಪರಿವರ್ತನಾ ರ್ಯಾಲಿಗೆ ಅನುಮತಿ ಕೋರಿ ಬಂದಿರುವ ಪತ್ರಗಳನ್ನು ಇನ್ನೂ ಖಡತಗಳಲ್ಲೇ ಇಡಲಾಗಿದೆ. ಬಿ.ಜೆ.ಪಿ ರ್ಯಾಲಿ ಇಂದಲೂ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುವ ಸಂಭವ ಇರುವ ಬಗ್ಗೆ ಶಂಕಿಸುತ್ತಿರುವ ಪೊಲೀಸರು ಪರಿವರ್ತನಾ ರ್ಯಾಲಿಗೆ ಅನುಮತಿ ನೀಡುವ ಬಗ್ಗೆ ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಕುರಿತು ಪರಿಸ್ಥಿತಿ ಆಧರಿಸಿ ಸ್ಥಳೀಯ ಅಧಿಕಾರಿಗಳು ತೀರ್ಮಾನಿಸಲಿದ್ದಾರೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalore police collected bonds from 127 goons ahed of Tippu Jayanthi. State Law and Order Additional Director General of Police Kamal Panth said in Mangalore on novembre 08 wednesday. Permision for Parivarthana Rally of BJP is also kept pending by Mangalore Police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ