ಮಂಗಳೂರು ಬಾಲೆ ಬರೆದ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ

Posted By:
Subscribe to Oneindia Kannada

ಮಂಗಳೂರು, ಜೂನ್ 15 : ತನ್ನೂರಿನ ರಸ್ತೆಯಲ್ಲಿದ್ದ ರೈಲ್ವೆ ಗೇಟ್‌ನಿಂದಾಗಿ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಆರನೇ ತರಗತಿ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಮೇಲ್ಸೇತುವೆ ನಿರ್ಮಿಸಲು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ಕ್ರಮಕ್ಕಾಗಿ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದೆ.

ಮೂಲತ ಪುತ್ತೂರಿನ, ಕಿನ್ನಿಗೋಳಿ ಸಮೀಪದ ಪದ್ಮನೂರಿನ ನಿವಾಸಿಗಳಾದ ರಮೇಶ್‌ ಕುಲಾಲ್ ಮತ್ತು ಕುಸುಮಾ ದಂಪತಿ ಪುತ್ರಿ, ಮೂಲ್ಕಿ ಸಮೀಪದ ಶಾರದಾ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ 'ಧೃತಿ' ಪತ್ರ ಬರೆದ ಬಾಲಕಿ.

PM Modi responds to Kinnigoli 6th std student letter

ಕಿನ್ನಿಗೋಳಿ-ಮಂಗಳೂರು ಮುಖ್ಯ ರಸ್ತೆಯ ಹಳೆಯಂಗಡಿಯ ಇಂದಿರಾನಗರ ಬಳಿ ರೈಲ್ವೆಗೇಟ್ ನಿರ್ಮಿಸಲಾಗಿದ್ದು, ಪದೇ ಪದೇ ಗೇಟ್‌ ಹಾಕುತ್ತಿದ್ದರಿಂದ ಸಾಕಷ್ಟು ತೊಂದರೆಯಾಗಿತ್ತು.

ರಾಯಚೂರು ಯುವಕನ ಪತ್ರಕ್ಕೆ ಸ್ಪಂದಿಸಿದ ನರೇಂದ್ರ ಮೋದಿ

ಈ ರೈಲ್ವೆ ಗೇಟ್‌ ಹಾಕಿದ್ದರಿಂದ ಅಂಬುಲೆನ್ಸ್ ನಲ್ಲಿದ್ದ ಗರ್ಭಿಣಿಯೊಬ್ಬರಿಗೆ ತೊಂದರೆಯಾಗಿದ್ದನ್ನು ಕಂಡಿದ್ದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಹಸ್ತಾಕ್ಷರದಲ್ಲೇ 3 ಪುಟಗಳ ಪತ್ರ ಬರೆದಿದ್ದಳು.

PM Modi responds to Kinnigoli 6th std student letter

ಪ್ರಧಾನಿ ಕಚೇರಿಯಿಂದ ಸೂಚನೆ ಬಂದೊಡನೆ ರೈಲ್ವೆ ಅಧಿಕಾರಿಗಳು ಧೃತಿ ತಂದೆ ರಮೇಶ್‌ ಕುಲಾಲ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದು ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿರುವ ಬಗ್ಗೆ ಮರು ಪತ್ರವನ್ನು ಬರೆದಿದ್ದಾರೆ.

ಧೃತಿ ಬರೆದ ಪತ್ರಕ್ಕೆ ಇದೀಗ ಹಳೆಯಂಗಡಿ ಇಂದಿರಾನಗರ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ಸಿದ್ಧವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A sixth standard student of Sharada English Medium School, Shimantoor near Kinnigoli named Dhruti has drawn the attention of Prime Minister (PM), Narendra Modi, through a letter, about the need to build overbridge for the railway gate situated at Kinnigoli.
Please Wait while comments are loading...