ಪ್ಲಾಸ್ಟಿಕ್ ನಿಷೇಧ : ಫ್ಲೆಕ್ಸ್ ಮತ್ತು ಬ್ಯಾನರ್ ಉದ್ಯಮಕ್ಕೆ ಬೀಗ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 05 : ಫ್ಲೆಕ್ಸ್ ಮತ್ತು ಬ್ಯಾನರ್ ಉದ್ಯಮಕ್ಕೆ ಪ್ಲಾಸ್ಟಿಕ್ ನಿಷೇಧದ ಬಿಸಿ ತಟ್ಟಿದೆ. ಕಳೆದೊಂದು ದಶಕದಿಂದ ಪ್ರಚಾರದ ಭರಾಟೆಯನ್ನು ಹೆಚ್ಚಿಸುವಲ್ಲಿ ಫ್ಲೆಕ್ಸ್, ಬ್ಯಾನರ್ ಮಹತ್ವದ ಪಾತ್ರ ವಹಿಸಿದ್ದವು. ಸದ್ಯ, ಈ ಉದ್ಯಮಗಳು ಬಾಗಿಲು ಮುಚ್ಚುವ ಭೀತಿ ಉದ್ ಭರಾಟೆ ಪ್ಲಾಸ್ಟಿಕ್ ನಿಷೇಧದ ಹಿನ್ನಲೆಯಲ್ಲಿ ಸ್ಥಗಿತಗೊಳ್ಳುವ ಹಾದಿಯಲ್ಲಿವೆ.

ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ಪ್ಲಾಸ್ಟಿಕ್ ಬಾವುಟ ಬಂದ್ ಮಾಡುವಂತೆ ಸರ್ಕಾರದಿಂದ ನೋಟಿಸ್ ನೀಡಲಾಗಿದೆ. ಫ್ಲೆಕ್ಸ್, ಬ್ಯಾನರ್ ಮುದ್ರಿಸದಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. ಇದರಿಂದಾಗಿ ಪ್ರಚಾರದ ಭಾಗದಲ್ಲಿ ಮುಂಚಿಣಿಯಲ್ಲಿದ್ದ ಫ್ಲೆಕ್ಸ್, ಬ್ಯಾನರ್ ಅಳಿವಿನಂಚಿನತ್ತ ಸಾಗಿದೆ. [ಕೆ.ಆರ್.ಮಾರುಕಟ್ಟೆ ಪ್ಲಾಸ್ಟಿಕ್ ಮುಕ್ತ]

flex

ಎಲ್ಲದಕ್ಕೂ ಬ್ಯಾನರ್ ಬೇಕು : ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಬ್ಯಾನರ್ ಅವಶ್ಯಕ ಎನ್ನುವಂತಾಗಿದೆ. ರಾಜಕೀಯ ಸಮಾರಂಭ, ಮದುವೆ, ಜಾತ್ರೆ ಉತ್ಸವ, ಸರ್ಕಾರಿ ನಾಮ ಫಲಕಗಳು ಅಷ್ಟು ಮಾತ್ರವಲ್ಲ ಹುಟ್ಟು, ಸಾವಿಗೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗುತ್ತಿತ್ತು. [ಪರಿಸರ ಸ್ನೇಹಿಯಾದ ಸರ್ಕಾರ, ಪ್ಲಾಸ್ಟಿಕ್ ಬಳಕೆ ನಿಷೇಧ]

ಹೀಗಾಗಿ ಬ್ಯಾನರ್ ಸದ್ಯದ ಮಟ್ಟಿಗೆ ಪ್ರಚಾರದ ಪ್ರಮುಖ ಅಂಗವಾಗಿತ್ತು. ಆದರೆ, ಫ್ಲೆಕ್ಸ್ ಬಂದ್ ಮಾಡುವ ಸರ್ಕಾರದ ಈ ನಿರ್ಧಾರದಿಂದ ಕೇವಲ ಫ್ಲೆಕ್ಸ್ ಬ್ಯಾನರ್ ಮತ್ತು ಜಾಹೀರಾತುದಾರರು ಬೀದಿಗೆ ಬೀಳುವುದಲ್ಲದೆ, ಪ್ರಚಾರಕ್ಕೆ ಸರ್ಕಾರ ಮಾಡಿಕೊಂಡಿರುವ ಇತರ ವ್ಯವಸ್ಥೆ ಯಾವುದು? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. [ಪ್ಲಾಸ್ಟಿಕ್ ಅತಿ ಬಳಕೆ ಮನುಕುಲಕ್ಕೆ ತಂದಿಟ್ಟ ಅಪಾಯ]

ಪರಿಸರ ನಾಶ ಕಾರಣ : ಪ್ಲಾಸ್ಟಿಕ್ ಮಿಶ್ರಿತ ವಸ್ತುವನ್ನು ಬಳಸಿ ಬ್ಯಾನರ್, ಫ್ಲೆಕ್ಸ್ ಪ್ರಿಂಟ್ ಮಾಡುವುದರಿಂದ ಪರಿಸರ ನಾಶದ ಜೊತೆಗೆ ಕಸದ ರಾಶಿಯಲ್ಲಿರುವ ಬ್ಯಾನರ್ ತುಂಡುಗಳನ್ನು ತಿಂದು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಹೀಗಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಕೆಲ ಪಾಲಿಕೆಗಳ ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ.

ಪರ್ಯಾಯ ವ್ಯವಸ್ಥೆ : ಪರಿಸರ ಹಾನಿ ಸೇರಿದಂತೆ ಮತ್ತಿತರ ಕಾರಣಗಳಿಂದ ಬ್ಯಾನರ್ ಬಂದ್ ಮಾಡಲು ಸರ್ಕಾರ ಮುಂದಾಗಿದ್ದು, ಸ್ವಾಗತಾರ್ಹವಾಗಿದೆ. ಆದರೆ, ಸರ್ಕಾರದ ಜಾಹೀರಾತು ಸೇರಿದಂತೆ ಖಾಸಗಿಯವರು ಪ್ರಚಾರಕ್ಕೆ ಯಾವ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುವುದನ್ನು ಸರ್ಕಾರ ತಿಳಿಸಿಲ್ಲ.

ಶೇ. 90% ರಷ್ಟು ಸರ್ಕಾರಿ ನಾಮಫಲಕ ಮತ್ತು ಜಾಹೀರಾತುಗಳು ಫ್ಲೆಕ್ಸ್. ಬ್ಯಾನರ್‌ನಲ್ಲಿವೆ. ಎಲ್ಲವನ್ನೂ ಬಂದ್ ಮಾಡಿದರೆ ಪ್ರಚಾರಕ್ಕೆ ಏನು ವ್ಯವಸ್ಥೆ ಮಾಡುತ್ತಾರೆ? ಹೀಗಾಗಿ ಬಂದ್ ಮಾಡುವ ಮುನ್ನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಉದ್ಯಮಿಗಳು ಒತ್ತಾಯಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka government issued a notification for complete ban of plastic and thermocol in the state. By the this order Flex, Banner business is to close its doors soon.
Please Wait while comments are loading...