ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು: ಜಗದೀಶ್ ಕಾರಂತ್ ವಿರುದ್ಧ ಪೊಲೀಸರಿಗೆ ಪಿಎಫ್ಐ ದೂರು

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 21: ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಜಗದೀಶ್ ಕಾರಂತ್ ಸೇರಿ ಮೂವರ ವಿರುದ್ಧ ಪಿಎಫ್‍ಐ ಪುತ್ತೂರು ನಗರ ಠಾಣೆಗೆ ದೂರು ನೀಡಿದೆ.

ಸೆ.15ರಂದು ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪಿಎಫ್ಐನ ಪುತ್ತೂರು ಸಿಟಿ ಡಿವಿಜನ್ ಕಾರ್ಯದರ್ಶಿ ಕೆ. ಅಝೀಝ್ ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ.

PFI files a complaint on HJV Jagadish Karanth for controversial speech

ಪ್ರಕರಣದಲ್ಲಿ ಒಂದನೇ ಆರೋಪಿ ಜಗದೀಶ್ ಕಾರಂತ್, ಇತರ ಆರೋಪಿಗಳಾದ ಡಾ. ಪ್ರಸಾದ್ ಭಂಡಾರಿ, ಅರುಣ್ ಕುಮಾರ್ ಪುತ್ತಿಲ, ಭಾಷಣ ಮಾಡಲು ಪ್ರೇರಣೆ ನೀಡಿದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ರತ್ನಾಕರ ಶೆಟ್ಟಿ, ನ್ಯಾಯವಾದಿ ಚಿನ್ಮಯ್ ರೈ, ಅಜಿತ್ ರೈ ಹೊಸಮನೆ, ಸಚಿನ್ ರೈ ಪಾಪೆಮಜಲು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

Recommended Video

Mangaluru: Jagadish karanth speech against police inspector that turns viral

ಸೆ.15ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಇದರ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮತ್ತು ತಾಲೂಕು ಘಟಕದ ಗೌರವ ಅಧ್ಯಕ್ಷ ಡಾ. ಪ್ರಸಾದ್ ಭಂಡಾರಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಈ ಮೂಲಕ ಕೋಮುಗಲಭೆ ಸೃಷ್ಟಿಸುವ ಮತ್ತು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ, ಕೋಮು ಭಾವನೆ ಕೆರಳಿಸುವ ಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಯ ಹಿನ್ನಲೆ
"ದಕ್ಷಿಣ ಕನ್ನಡದ ಸಂಪ್ಯ ಠಾಣೆಯ ಎಸ್ಐ ಖಾದರ್ ಅವರನ್ನು ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಯಾಕೆ ಓಡಿಸಬಾರದು. ನಾನು ಓರ್ವ ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನ್ನನ್ನು ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು ? ನಿನ್ನ ತಲೆಯನ್ನು ಬೋಳಿಸಿ ಕತ್ತೆಯ ಮೇಲೆ ಕೂರಿಸಿ ಪುತ್ತೂರಿನಲ್ಲಿ ಮೆರವಣಿಗೆ ಮಾಡುವುದು ನಮಗೆ ಲೆಕ್ಕವೇ ಅಲ್ಲ," ಎಂದು ಕೀಳು ಮಟ್ಟದ ಭಾಷಣವನ್ನು ಜಗದೀಶ್ ಕಾರಂತ್ ಮಾಡಿದ್ದರು. ಮತ್ತು ಜಗದೀಶ್ ಕಾರಂತ್ ಮಾಡಿದ ಭಾಷಣ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

English summary
PFI Puttur division secretary files a complaint on HJV Jagadish Karanth for controversy speech at Puttur Town Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X