ಗಾಂಜಾ ವಿರುದ್ದ ಧ್ವನಿ ಎತ್ತಿದವನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್. 29 : ಗಾಂಜಾ ಹಾವಳಿ ವಿರುದ್ದ ಧ್ವನಿ ಎತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪಿನಲ್ಲಿ ನಡೆದಿದೆ.

ತಾರನಾಥ್ ಎಂಬವರು ಗಾಂಜಾ ವಿರುದ್ದ ಧ್ವನಿ ಎತ್ತಿದ್ದರು. ಈ ಹಿನ್ನಲೆಯಲ್ಲಿ ತಾರನಾಥ್ ರಾತ್ರಿ ಮನೆಯಲ್ಲಿ ಮಲಗಿರುವ ಸಮಯದಲ್ಲಿ ವೆಂಟಿಲೇಟರ್ ಮೂಲಕ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಪತ್ನಿ ಹಾಗೂ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದು. ತಾರನಾಥ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಮಂಗಳೂರಲ್ಲಿ 10 ಲಕ್ಷ ಮೌಲ್ಯದ ಗಾಂಜಾ ವಶ]

Petrol attack on couple, Man sustains burn injuries

ಬೆಡ್ ರೂಂಮಿನ ವೆಂಟಿಲೇಟರ್ ಮೂಲಕ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ. ತಾರನಾಥ್ ಬೆಡ್‌ರೂಮ್‌ನಲ್ಲಿ ಪತ್ನಿ ವಿದ್ಯಾ ಹಾಗೂ 10 ವರ್ಷದ ಪುತ್ರ ಮಿಥುನ್ ಜೊತೆ ಇದ್ದರು.ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. [ಬಿಡದ ಗಾಂಜಾ ಮಾರಾಟ ಚಾಳಿ: ಜಾಮೀನು ರದ್ದು]

Petrol attack on couple, Man sustains burn injuries

ತಾರನಾಥ್ ಬೆಂಕಿಯಿಂದ ಪತ್ನಿ, ಮಗನನ್ನು ರಕ್ಷಿಸಿದ್ದಾರೆ. ಆದರೆ, ರಕ್ಷಿಸುವ ಭರದಲ್ಲಿ ಅವರ ಎರಡೂ ಕೈಗಳಿಗೂ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Miscreants poured petrol through the ventilator of the bedroom and attempted to burn alive Taranath Yadav and his family at Basti Padpu, Ullal Police Sation limits here on October 28.
Please Wait while comments are loading...