ಏರ್ ಟೆಲ್ ಗೆ 50 ಸಾವಿರ ದಂಡ, ಮಂಗಳೂರು ಗ್ರಾಹಕರ ಖುಲ್ ಜಾ ಸಿಮ್ ಸಿಮ್

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಫೆಬ್ರವರಿ 4: ಮಂಗಳೂರು ಎಂದ ಕೂಡಲೇ ಬುದ್ಧಿವಂತರು ಅಲ್ಲಿ ಹೆಚ್ಚು ಎಂಬ ಮಾತು ಕೇಳಿಬರುತ್ತದೆ. ಆದರೆ ಧೈರ್ಯವಂತರು ಕೂಡಾ ಅಂತ ಕೇಳಿದ್ದೀರಾ? 'ವಿದ್ಯಾವಂತರ ನಾಡು' ಎಂಬ ಹಣೆಪಟ್ಟಿ ಕಟ್ಟಿಕೊಂಡು ಬೀಗುವ ಮಂಗಳೂರು ಇದೀಗ ಧೈರ್ಯಶೀಲರೂ ಹೌದು ಎಂಬುದನ್ನು ಸಾಧಿಸಿದೆ. ಏರ್ ಟೆಲ್ ಕಂಪನಿಗೆ ಪಾಠ ಕಳಿಸಿದ ಕುಡ್ಲದ ಧೈರ್ಯವಂತನ ಘಟನೆ ಬಗ್ಗೆ ಮುಂದೆ ಓದಿ.

ಮೊಬೈಲ್ ಸೇವೆ ಪೂರೈಕೆದಾರ ಏರ್ ಟೆಲ್ ವಿರುದ್ಧ ನಗರದ ವ್ಯಕ್ತಿಯೊಬ್ಬರು ಜಯ ಗಳಿಸಿದ್ದಾರೆ. ಹೌದು, ಏರ್ ಟೆಲ್ ಸೇವೆಯಲ್ಲಿ ಕೊರತೆ ಇದೆ ಎಂದು ಮಂಗಳೂರಿನ ಗ್ರಾಹಕರೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಇತ್ಯರ್ಥ ವೇದಿಕೆಗೆ ದೂರು ಸಲ್ಲಿಸಿದ್ದರು. ಈ ಪರಿಣಾಮ ಏರ್ ಟೆಲ್ ವಿರುದ್ಧವಾಗಿ ತೀರ್ಪು ಹೊರಬಿದ್ದಿದ್ದು, ಇದೀಗ ಆ ಗ್ರಾಹಕರಿಗೆ ಪರಿಹಾರ ಧನವಾಗಿ 50,000 ರುಪಾಯಿ ನೀಡಬೇಕು ಎಂದು ಆದೇಶ ಹೊರಬಿದ್ದಿದೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]

Pay Rs 50,000, Consumer Forum tells Airtel in Mangaluru

ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಇತ್ಯರ್ಥ ವೇದಿಕೆ ಪ್ರಮಾಣ ಪತ್ರ ನೀಡಿದೆ. ಮಂಗಳೂರಿನ ಅಬ್ದುಲ್ಲಾ ರೆಹಮಾನ್ ಪರಿಹಾರ ಪಡೆದ ಗ್ರಾಹಕರು. ಮಂಗಳೂರಿನ ಅಬ್ದುಲ್ಲಾ ಎ ರೆಹಮಾನ್ ಅವರು 2013ರಲ್ಲಿ ನಗರದಲ್ಲಿ ಕಾರ್ಯಾಚರಿಸುತ್ತಿರುವ ಏರ್‌ಟೆಲ್ ಸಂಸ್ಥೆಯೊಂದರಿಂದ 1750 ರುಪಾಯಿ ಪಾವತಿಸಿ ಸಿಮ್ ಕಾರ್ಡ್ ಖರೀದಿಸಿದ್ದರು.

ಆದರೆ, ಕೆಲವು ಸಮಯದ ಬಳಿಕ ಕಂಪೆನಿಯಿಂದ ಅಬ್ದುಲ್ಲಾರಿಗೆ ಕರೆ ಮಾಡಿ ''ನೀವು ಪಡೆದುಕೊಂಡದ್ದು ಫ್ಯಾನ್ಸಿ ನಂಬರ್ ಆಗಿದ್ದು, ಅದಕ್ಕೆ ಹೆಚ್ಚುವರಿಯಾಗಿ 25,000 ರುಪಾಯಿ ಪಾವತಿಸಬೇಕು" ಎಂದು ತಿಳಿಸಲಾಗಿತ್ತು. ಅಬ್ದುಲ್ಲಾ ಅವರು ಇದಕ್ಕೆ ನಿರಾಕರಿಸಿದ್ದರು. ಆಗ ಕಂಪೆನಿಯು ಆ ಮೊಬೈಲ್ ನಂಬರನ್ನು ಬೇರೆ ಗ್ರಾಹಕರಿಗೆ 25,000 ರುಪಾಯಿಗೆ ನೀಡಿತ್ತು.[ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!]

Pay Rs 50,000, Consumer Forum tells Airtel in Mangaluru

ಇದನ್ನು ಪ್ರಶ್ನಿಸಿ ಅಬ್ದುಲ್ಲಾ 2013ರ ಏಪ್ರಿಲ್ 4ರಂದು ದ.ಕ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ವೇದಿಕೆಯ ಹೆಚ್ಚುವರಿ ಪೀಠದ ಅಧ್ಯಕ್ಷ ವಿಶ್ವೇಶ್ವರ ಭಟ್ ಮತ್ತು ಸದಸ್ಯ ಟಿ.ಸಿ. ರಾಜಶೇಖರ್ ಪ್ರಕರಣವನ್ನು ಕೈಗೆತ್ತಿಕೊಂಡು ಎರಡು ಕಡೆಯ ವಾದಗಳನ್ನು ಆಲಿಸಿದರು.

ಅಂತಿಮವಾಗಿ ಏರ್ ಟೆಲ್ ನದು ಸೇವಾ ಲೋಪ ಎಸಗಿದೆ ಎಂಬ ತೀರ್ಮಾನಕ್ಕೆ ಬಂದು, ಕಂಪೆನಿಯು ಅದೇ ನಂಬರನ್ನು ಅಬ್ದುಲ್ಲಾ ಅವರಿಗೆ ಮಂಜೂರು ಮಾಡಿ ಆಕ್ಟಿವೇಟ್ ಮಾಡಬೇಕು. ಇಲ್ಲವೇ 25,000 ರುಪಾಯಿಯನ್ನು ದೂರು ನೀಡಿದ ದಿನಾಂಕದಿಂದ ಅನ್ವಯವಾಗುವಂತೆ ಶೇ 9ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶ ನೀಡಿದೆ.[ನಾಯಿ, ಮಂಗ ಕಚ್ಚಿದರೆ ಎರಡು ಲಕ್ಷ ಪರಿಹಾರ ಸಿಗುತ್ತೆ!]

ಜತೆಗೆ 20,000 ರುಪಾಯಿ ಅಬ್ದುಲ್ಲಾ ಅವರಿಗಾದ ಮಾನಸಿಕ ಕಿರುಕುಳಕ್ಕೆ ಮತ್ತು 5000 ರುಪಾಯಿಯನ್ನು ನ್ಯಾಯಾಲಯದ ವೆಚ್ಚವಾಗಿ 30 ದಿನಗಳಲ್ಲಿ ಪಾವತಿಸಬೇಕು ಎಂದು ತೀರ್ಪು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Victory for an aggrieved consumer, Dakshina Kannada District Consumer Disputes Redressal Forum has decreed that mobile service provider Airtel is guilty of deficiency in service and ordered the company to pay compensatory amount of RS. 50,000.
Please Wait while comments are loading...