ರಾತ್ರಿಯಲ್ಲಿ ಒಂಟಿ ಮಹಿಳೆಗೆ ಸಹಾಯವಿತ್ತ ಪೊಲೀಸ್ ಗೆ ಸನ್ಮಾನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 20: ಮಂಗಳಾದೇವಿ ಕಡೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರನ್ನು ಬಸ್ ಕಂಡಕ್ಟರ್ ಅರ್ಧ ದಾರಿಯಲ್ಲಿ ಇಳಿಸಲು ಹೊರಟಿದ್ದ. ರಾತ್ರಿ ಹೊತ್ತು ಅರ್ಧ ದಾರಿಯಲ್ಲಿ ಇಳಿದು ಕಕ್ಕಾಬಿಕ್ಕಿಯಾಗಲಿದ್ದ ಮಹಿಳೆ ಫೋನೆತ್ತಿ ನೇರ ಕರೆ ಮಾಡಿದ್ದು ಟ್ರಾಫಿಕ್ ಎಸಿಪಿ ಮೊಬೈಲ್ ಗೆ.

ತಕ್ಷಣ ಮಹಿಳೆ ಕರೆಗೆ ಓಗೊಟ್ಟ ಟ್ರಾಫಿಕ್ ಪೊಲೀಸ್ ಒಬ್ಬರು ಆಕೆಯನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ. ಟ್ರಾಫಿಕ್ ಪೊಲೀಸರ ಈ ಮಾನವೀಯತೆಯ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. [ಗರ್ಭಿಣಿ ಮಹಿಳೆಗೆ ಮಿಡಿದ ಪೊಲೀಸ್ ಹೃದಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ]

ಮಾತ್ರವಲ್ಲ ಮಹಿಳೆಯ ದೂರಿಗೆ ಸ್ಪಂದಿಸಿದ ಪೊಲೀಸ್‌ ಅಧಿಕಾರಿಗೆ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಶ್ಲಾಘನೆ ವ್ಯಕ್ತಪಡಿಸಿ 5,000 ರೂ. ಬಹುಮಾನವನ್ನೂ ನೀಡಿದ್ದಾರೆ.[ಬಸ್ಸು ಕೆಟ್ಟು ನಿಂತಾಗ ಆಪದ್ಬಾಂಧವನಾದ ಟ್ರಾಫಿಕ್ ಪೊಲೀಸ್!]

Passenger reaches her Destination with Police Escort in Mangaluru

ನಡೆದಿದ್ದೇನು?
ಶನಿವಾರ ರಾತ್ರಿ ಸುಮಾರು 7.45ರ ಸುಮಾರಿಗೆ ಮಹಿಳೆಯೊಬ್ಬರು ಸಂಚಾರಿ ವಿಭಾಗದ ಎಸಿಪಿ ಮೊಬೈಲ್‌ಗೆ ಕರೆಮಾಡಿ ತಾನು 15 ನಂಬರ್‌‌ನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಮಂಗಳಾದೇವಿ ಬಸ್ ನಿಲ್ದಾಣಕ್ಕೆ ಟಿಕೆಟ್ ಪಡೆದಿದ್ದೇನೆ. ಆದರೆ ಕಂಕನಾಡಿ ನಂತರ ಈ ಬಸ್‌‌‌ನಲ್ಲಿ ಬೇರೆ ಪ್ರಯಾಣಿಕರು ಇಲ್ಲ. ಇದರಿಂದ ತನ್ನನ್ನು ಕಂಕನಾಡಿ ಬಸ್ ನಿಲ್ದಾಣದಲ್ಲಿ ಇಳಿಯುವಂತೆ ಕಂಡಕ್ಟರ್ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೈಗೊಳ್ಳಬೇಕೆಂದು ಕೋರಿದ್ದರು.

ಎ.ಸಿ.ಪಿ. ಅವರ ನಿರ್ದೇಶನದಂತೆ ಕರ್ತವ್ಯನಿರತ ಸಂಚಾರ ಪೂರ್ವ ಪೊಲೀಸ್ ಠಾಣಾ ಉಪನಿರೀಕ್ಷಕ ಆರ್.ಕೆ. ಗವಾರ್ ಮಹಿಳೆಯನ್ನು ಅದೇ ಬಸ್ಸಿನಲ್ಲಿ ಮಂಗಳಾದೇವಿ ಬಸ್ ನಿಲ್ದಾಣದವರೆಗೆ ಕರೆದುಕೊಂಡು ಹೋಗುವಂತೆ ಬಸ್ಸಿನವನಿಗೆ ಸೂಚಿಸಿದ್ದಾರೆ. ಅಲ್ಲದೆ ಮಹಿಳೆಯ ಸುರಕ್ಷತೆ ಮತ್ತು ಅವರು ಮಂಗಳಾದೇವಿಗೆ ತಲುಪಿದ ಬಗ್ಗೆ ಖಾತರಿಪಡಿಸಿಕೊಳ್ಳಲು ಅವರು ಬಸ್ಸಿನ ಹಿಂದೆಯೆ ತನ್ನ ಮೋಟಾರ್ ಸೈಕಲಿನಲ್ಲಿ ಹಿಂಬಾಲಿಸಿದ್ದಾರೆ.[ಹೃದಯವಂತಿಕೆ ಮೆರೆದ ಟ್ರಾಫಿಕ್ ಪೊಲೀಸ್ ಕುಮಾರ್]

ಪೊಲೀಸರ ಈ ಸಕಾಲಿಕ ಕ್ರಮದಿಂದ ಸಂತೋಷಗೊಂಡ ಆ ಮಹಿಳೆ ಮತ್ತೆ ಸಂಚಾರಿ ವಿಭಾಗದ ಎಸಿಪಿ ಮೊಬೈಲ್‌ಗೆ ಕರೆಮಾಡಿ ಮಾಡಿ ಶ್ಲಾಘಿಸಿ ಧನ್ಯವಾದ ಸಲ್ಲಿಸಿದ್ದರು.

ಈ ರೀತಿ ಸಕಾಲಿಕವಾಗಿ ಸಾರ್ವಜನಿಕರ ಕರೆಗೆ ಸ್ಪಂದಿಸಿ, ಇಲಾಖೆ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿರುವ ಆರ್.ಕೆ.ಗವಾರ್‌‌ ಅವರನ್ನು ಪೊಲೀಸ್ ಆಯುಕ್ತರು ಗೌರವಿಸಿ, ಶ್ಲಾಘನಾ ಪತ್ರ ಹಾಗೂ ರೂ. 5 ಸಾವಿರ ನಗದು ನೀಡಿ ಪ್ರೋತ್ಸಾಹಿಸಿದ್ದಾರೆ. ಈ ಬಗ್ಗೆ ಬಸ್ ನಿರ್ವಾಹಕನ ವಿರುದ್ಧ ದೂರು ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lone lady bus passenger reaches her destination with police escort. The bus conductor had refused to leave her to her destiny so she ranged up to ACP Traffic and lodged a complaint and then she was escorted by the police inspector and made her reach her destiny.
Please Wait while comments are loading...