ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುದನಾಳದೊಳಗೆ ಚಿನ್ನವಿಟ್ಟುಕೊಂಡು ಸಾಗಿಸುತ್ತಿದ್ದವನ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 20 : ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಸುಮಾರು 10.5 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕಾಸರಗೋಡು ಮೂಲದ ಅಬ್ದುಲ್ ರಾಝಕ್ (49) ಎಂಬುದಾಗಿ ಗುರುತಿಸಲಾಗಿದೆ. ಬಂಧಿತನಿಂದ ಸುಮಾರು 10.5 ಲಕ್ಷ ರು. ಮೌಲ್ಯದ ಒಟ್ಟು 349.80 ಗ್ರಾಂ ತೂಕದ ಚಿನ್ನದ ಬಾರ್ಗಳನ್ನು ಅಧಿಕರಿಗಳು ವಶಪಡಿಸಿಕೊಂಡಿದ್ದಾರೆ.

Passenger at Mangaluru airport caught with Rs 10.5 lac gold hidden in rectum

ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಸುಮಾರು 6.೩೦ಕ್ಕೆ ತಲುಪಿದ್ದು ನಂತರ, ಪ್ರಯಾಣಿಕರ ಸಂಪೂರ್ಣ ವಿಚಾರಣೆ ಮತ್ತು ಪರೀಕ್ಷೆ ಮಾಡುವ ವೇಳೆ ಗುದನಾಳದೊಳಗೆ ನಾಲ್ಕು ಚಿನ್ನದ ಬಾರ್ ಗಳನ್ನು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ವೈದ್ಯಕೀಯ ವೃತ್ತಿಪರರ ಸಲಹೆಯನ್ನು ತೆಗೆದುಕೊಂಡ ನಂತರ ಚಿನ್ನವನ್ನು ಗುದನಾಳದಿಂದ ಸುರಕ್ಷಿತವಾಗಿ ತೆಗೆಯಲಾಯಿತು. ಮಂಗಳೂರು, ಮುಂಬೈ, ದೆಹಲಿ, ಅಹ್ಮದಾಬಾದ್, ಚೆನ್ನೈ, ಕೊಚ್ಚಿ, ತಿರುವನಂತಪುರ, ಕೋಳಿಕೋಡು, ಬೆಂಗಳೂರು, ಗೋವಾ ಮತ್ತು ಲಕ್ನೋದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿದ್ದಾನೆಂದ ಆರೋಪಿ ವಿಚಾರಣೆ ವೇಳೆ ಒಪಿಕೊಂಡಿದ್ದಾನೆ.

English summary
Acting on credible intelligence, the officers of the Directorate of Revenue Intelligence (DRI), Mangaluru, on Wednesday April 19 arrested a passenger and recovered gold worth over Rs 10 lac at Mangalore International Airport here. The gold was concealed by the passenger inside his body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X