• search

ವಾಘ್ಮೋರೆ ನಮ್ಮ ಕಾರ್ಯಕರ್ತ ಅಲ್ಲ, ಆರ್‌ಎಸ್‌ಎಸ್‌ ಕಾರ್ಯಕರ್ತ: ಮುತಾಲಿಕ್

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮಂಗಳೂರು, ಆಗಸ್ಟ್ 31: ಗೌರಿಗೆ ಗುಂಡಿಕ್ಕಿ ಕೊಂದ ಆರೋಪ ಎದುರಿಸುತ್ತಿರುವ ಪರಶುರಾಮ್ ವಾಘ್ಮೋರೆ ಶ್ರೀರಾಮ ಸೇನೆ ಕಾರ್ಯಕರ್ತ ಅಲ್ಲ ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು, ಗೌರಿ ಹತ್ಯೆ ಆರೋಪಿ ಪರಶುರಾಮ್ ವಾಘ್ಮೋರೆ ಹೆಗಲ ಮೇಲೆ ಕೈಹಾಕಿ ತೆಗೆಸಿಕೊಂಡಿರುವ ಫೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪರಶುರಾಮ್ ವಾಘ್ಮೋರೆ ಶ್ರೀರಾಮ ಸೇನೆ ಕಾರ್ಯಕರ್ತ ಎನ್ನಲಾಗುತ್ತಿದೆ. ಹಾಗಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

    ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಆಗ್ರಹ

    ಸಾಕಷ್ಟು ಜನರು ನನ್ನೊಂದಿಗೆ ಫೊಟೊ ತೆಗೆಸಿಕೊಂಡಿದ್ದಾರೆ. ಹಾಗೆಂದು ಎಲ್ಲರೂ ನಮ್ಮ ಸಂಘಟನೆ ಸದಸ್ಯರಲ್ಲ. ಪರಶುರಾಮ್ ವಾಘ್ಮೋರೆ ಕೂಡಾ ಹೀಗೆಯೇ ನನ್ನೊಂದಿಗೆ ಫೊಟೊ ತೆಗೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

    Parashuram Wagmore is not Sri ram sena member: Pramod Muthalik

    ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣದಲ್ಲಿ ಇದ್ದದ್ದು ಆರ್‌ಎಸ್‌ಎಸ್ ಕಾರ್ಯಕರ್ತರು. ಪರಶುರಾಮ್ ವಾಘ್ಮೋರೆ ಸಹ ಅದೇ ಪ್ರಕರಣದಲ್ಲಿ ಇದ್ದ ಹಾಗಾಗಿ ಆತ ಆರ್‌ಎಸ್‌ಎಸ್‌ ಕಾರ್ಯಕರ್ತ ಇರಬಹುದು ಎಂದು ಅವರು ಹೇಳಿದರು.

    ಗೌರಿ ಹತ್ಯೆ ಆರೋಪಿ ಪರುಶುರಾಮ್ ಬಗ್ಗೆ ಗೊತ್ತಿಲ್ಲ: ಮುತಾಲಿಕ್

    ಒಂದು ಚಿತ್ರ ಇಟ್ಟುಕೊಂಡು ಶ್ರೀರಾಮಸೇನೆಗೆ ಕೆಟ್ಟ ಹೆಸರು ಬಳಿಯುವ ಯತ್ನ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ನಿಷೇಧ ಮಾಡಬೇಕು ಎಂದು ಹೋರಾಟ ನಡೆಯುತ್ತಿದೆ. ವಿಚಾರವಾದಿಗಳು, ಯೋಧರ, ವಿಜ್ಞಾನಿಗಳ ಹತ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Gauri Lankesh murder accused Parashuram Wagmore is not Sri Rama Sene member says Pramod Muthalik. He says Vagmore may RSS member not Sri ram Sena.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more