ಮಂಗಳೂರು: ಮೆಲ್ರಿಕ್ ಡಿಸೋಜಾ ಹತ್ಯೆ, 6 ಜನರ ಬಂಧನ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 28 : ಕ್ರಿಸ್ಮಸ್ ದಿನದಂದು (ಡಿಸೆಂಬರ್ 25) ಮಂಗಳೂರಿನಲ್ಲಿ ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್, ತಡರಾತ್ರಿ ಯುವಕನ ಬರ್ಬರ ಹತ್ಯೆ

ಬಂಧಿತರನ್ನು ಗೋರಿಗುಡ್ಡೆ ನಿವಾಸಿಗಳಾದ ನಿಶಾಕ್ ಪೂಜಾರಿ (28)ವಿನೇಶ್ ಕುಮಾರ್ (30), ಮುಳಿಹಿತ್ಲು ನಿವಾಸಿಗಳಾದ ಸಚಿನ್ ಶೆಟ್ಟಿ(22), ಜಪ್ಪಿನಮೊಗರು ನಿವಾಸಿ ಗಣೇಶ್ ಕುಲಾಲ್ (34), ಕಂಕನಾಡಿ ನಿವಾಸಿ ಪ್ರವೀಣ್ ಪೂಜಾರಿ (42), ಜಪ್ಪು ಕುಟ್ಪಾಡಿ ನಿವಾಸಿ ಸಂದೀಪ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

Pandeshwara police arrests 6 persons in Melrick D’Souza murder case

ಈ ಕೊಲೆ ಪ್ರಕರಣದ ಕುರಿತು ತನಿಖೆ ನಡೆಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಗರದ ವಿವಿದೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಹತ್ಯೆಗೆ ಬಳಸಿದ 5 ಮಾರಾಕಾಸ್ತ್ರಗಳು, 2 ಬೈಕ್, ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2016 ರಲ್ಲಿ ನಗರದ ಮಾರ್ನಮಿಕಟ್ಟೆ ಎಂಬಲ್ಲಿ ನಡೆದಿದ್ದ ಸಂದೀಪ್ ಶೆಟ್ಟಿ ಕೊಲೆಯತ್ನ ಪ್ರಕರಣಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 25 ರ ತಡರಾತ್ರಿ ಮಂಗಳೂರಿನ ವೆಲೆನ್ಸೀಯಾದಲ್ಲಿ ಮೆಲ್ರಿಕ್ ಡಿಸೋಜಾ(21) ಅವರನ್ನು ತಂಡ ಒಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿತ್ತು.

ಹತ್ಯೆಗೀಡಾಗಿದ್ದ ಮೆಲ್ರಿಕ್ ಡಿಸೋಜಾ, ರೌಡಿಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರನಾಗಿದ್ದು, ಈತ 2016 ರಲ್ಲಿ ನಡೆದಿದ್ದ ಸಂದೀಪ್ ಹತ್ಯೆ ಯತ್ನ ಪ್ರಕರಣದ ಆರೋಪಿಯಾಗಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pandeshwara Police on Thursday, December 28, 6 persons arrested relating to the murder of Melrick D’Souza (21).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ