ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : 1 ಲಕ್ಷ ದೋಚಿದವರು ಎರಡು ದಿನದಲ್ಲೇ ಸಿಕ್ಕಿಬಿದ್ದರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 09 : ವಿಳಾಸ ಕೇಳುವ ನೆಪದಲ್ಲಿ ಸ್ಟುಡಿಯೋದ ಮಾಲೀಕನನ್ನು ದರೋಡೆ ಮಾಡಿದ ಆರೋಪಿಗಳನ್ನು ಎರಡು ದಿನದಲ್ಲಿ ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. 6 ಮಂದಿಯ ತಂಡ ಜೂನ್ 5ರಂದು ದರೋಡೆ ಮಾಡಿತ್ತು.

ಬಂಧಿತರನ್ನು ಸರ್ಫುದ್ದೀನ್ (19), ಮಹಮ್ಮದ್ ರಮ್ಲಾನ್ (20), ಶೇಕ್ ಮಹಮ್ಮದ್ ಆರೀಫ್ ಫೈಜಲ್ (19), ಸಲ್ಮಾನ್ ಫಾರೀಸ್ (19), ನಿಮಾರ್ ಹಶ್ಮಿ (19) ಎಂದು ಗುರುತಿಸಲಾಗಿದೆ. ಪಾಂಡೇಶ್ವರ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. [ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]

pandeshwara

ಗುಣಪ್ರಸಾದ್ ಎಂಬವವರು ಜೂನ್ 5ರಂದು ಸಂಜೆ ಗೂಡುಶೆಡ್ಡೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮೂರು ಮಂದಿ ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿದ್ದರು. ಈ ಸಂದರ್ಭದಲ್ಲಿ ಮತ್ತೆ ಮೂವರು ಸ್ಕೂಟರ್‌ನಲ್ಲಿ ಬಂದು ಗುಣಪ್ರಸಾದ್‌ರನ್ನು ರೈಲ್ವೆ ಟ್ರ್ಯಾಕ್ ಬಳಿ ಕರೆದುಕೊಂಡು ಹೋಗಿ ಥಳಿಸಿದ್ದರು. [ಇವರು ಹಗಲಿನಲ್ಲಿ ಸೆಲ್ಸ್‌ಮನ್, ರಾತ್ರಿ ದರೋಡೆಕೋರರು]

ಗುಣಪ್ರಸಾದ್ ಅವರ ಕ್ಯಾಮೆರಾ, ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರ, ಕಿಸೆಯಲ್ಲಿದ್ದ 1,500 ನಗದು , ಮೊಬೈಲ್, ಬ್ಯಾಂಕ್‌ನ ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್ ಮತ್ತು ಪರ್ಸ್‌ ಸೇರಿ ಒಟ್ಟು 1,31,500 ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದರು.

ಎರಡು ದಿನದಲ್ಲಿಯೇ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ ಕ್ಯಾಮೆರಾ, ಚಿನ್ನದ ಸರ, ಸುಮಾರು 12 ಸಾವಿರ ಮೌಲ್ಯದ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary
Mangaluru Pandeshwara police arrested 6 accused with in two days who robbed studio owner Gunaprasad near Gudushedde on June 5, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X