ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂತ್ರವಾದಿ ಮಾತು ಕೇಳಿ ಹಾವು ಕೊಂದ ವ್ಯಕ್ತಿ ಮೇಲೆ ಹಲ್ಲೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ, 28: ಹಾವನ್ನು ಕಲ್ಲಿನಿಂದ ಹೊಡೆದು ಕೊಂದ ವ್ಯಕ್ತಿಯ ಮೇಲೆ ಪಂಚಾಯತ್ ಸದಸ್ಯರ ತಂಡವೊಂದು ವಿಟ್ಲದ ಕೊಲ್ನಾಡ್ ಎಂಬಲ್ಲಿ ಹಲ್ಲೆ ನಡೆಸಿದ್ದು, ಮನೆತೊರೆಯುವಂತೆ ಬೆದರಿಕೆ ಹಾಕಿದ್ದಾರೆ.

ಕೊಲ್ನಾಡ್ ನಿವಾಸಿ ಸಿದ್ದೀಕ್ ಎಂಬವರೇ ಹಾವನ್ನು ಕೊಂದ ವ್ಯಕ್ತಿ. ಈತನ ಮೇಲೆ ಪಂಚಾಯತ್ ಸದಸ್ಯ ಪವಿತ್ರ ಪೂಂಜ, ಹಾಗೂ ಸಂದೀಪ್ ಮನೆಗೆ ಬಂದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.[30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

Mangaluru

ಪಂಚಾಯತ್ ಸದಸ್ಯರು ಹಲ್ಲೆ ಮಾಡಿದ್ದು ಯಾಕೆ?

ಕೊಲ್ನಾಡ್ ಊರಿನ ಬೊರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗಿತ್ತು. ಆದಕಾರಣ ನೀರಿಗಾಗಿ ಬೋರ್ ವೆಲ್ ಕೊರೆದಿದ್ದಾರೆ. ಹೊಸ ಬೋರ್ ವೆಲ್ ತೆಗೆದಾಗಲೂ ಅಲ್ಲಿ ನೀರು ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಮಂತ್ರವಾದಿಯೊಬ್ಬರ ಬಳಿ ಹೋಗಿ ವಿಚಾರಿಸಿದ್ದಾರೆ.

ಆಗ ಮಂತ್ರವಾದಿಯೂ ನಿಮ್ಮ ಊರಿನಲ್ಲಿ ವ್ಯಕ್ತಿಯೊಬ್ಬರು ಹಾವನ್ನು ಕೊಂದಿದ್ದಾರೆ. ಇದರಿಂದ ನೀರು ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಹಾವನ್ನು ಕೊಂದ ಸಿದ್ದೀಕ್ ಮನೆಗೆ ತೆರಳಿದ ತಂಡ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.[ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!ಯ]

ಮನೆಯವರ ರಕ್ಷಿಸಲು ನಮ್ಮ ಮೆನೆಗೆ ಬಂದ ಹಾವನ್ನು ಕೊಂದಿದ್ದು ನಿಜ. ಈ ಕಾರಣಕ್ಕೆ ಪಂಚಾಯತ್ ಸದಸ್ಯರು ನನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮನ್ನು ಮನೆ ಬಿಟ್ಟು ಹೋಗುವಂತೆ ಬೆದರಿಸಿದ್ದಾರೆ. ಕೂಲಿ ಮಾಡಿ ಬದುಕುವ ನಮಗೆ ಬೇರೆ ಮನೆಗೆ ತೆರಳಲು ಸಾಧ್ಯವಿಲ್ಲ ಎಂದು ಮುಮ್ತಾಝ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಿಬಾಕ್-2016 ರಾಷ್ಟೀಯ ಕಲೋತ್ಸವ, ಮಾಡನ್ನೂರ್ ದ್ವಿತೀಯ

ಪುತ್ತೂರು, ಜನವರಿ, 28: ಸಿಬಾಕ್ ರಾಷ್ಟೀಯ ಮಟ್ಟದ ಪ್ರತಿಭಾ ಕಲೋತ್ಸವದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.

Puttur

ವಿಶ್ವ ವಿಖ್ಯಾತ ದಾರುಲ್ ಹುದಾ ವಿಶ್ವ ವಿದ್ಯಾಲಯ ಚೆಮಾಡ್ ಇದರ ಆಶ್ರಯದಲ್ಲಿ ಪ್ರತೀ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಪ್ರತಿಭಾ ಸ್ಪರ್ಧೆಯಲ್ಲಿ ಸುಮಾರು 3900 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು ವಿವಿಧ ಭಾಷೆಯ 22 ವೇದಿಕೆಯಲ್ಲಿ ಸ್ಪರ್ಧೆಗಳು ನಡೆದಿದ್ದವು.

English summary
Panchayat members Pavitra poonja and Sandeep onslaugt on a men Siddiq in Kolnad, Mangaluru. Siddiq was murdered a snake.Noorul huda islamic academy won 2nd prize in competation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X