ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ದಿನಾಚರಣೆ: ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು

By ಐಸಾಕ್ ರಿಚರ್ಡ್
|
Google Oneindia Kannada News

ಸಾಧನೆಗೆ ವಯಸ್ಸು ಬೇಕಿಲ್ಲ ಮನಸ್ಸು ಬೇಕು, ಉತ್ಸಾಹ ಬೇಕು ಎಂಬ ಉಕ್ತಿಗೆ ಹೇಳಿ ಮಾಡಿಸಿದ ಪ್ರತಿಭೆ ಮೂಡುಬಿದಿರೆಯ ಪಂಚಮಿ ಮಾರೂರು. ಯಕ್ಷಗಾನ, ನೃತ್ಯ, ಸಂಗೀತ, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರ ಹೀಗೆ ಪಂಚಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ ನಾಡಿನಾದ್ಯಂತ ತನ್ನ ಕೀರ್ತಿ ಬೆಳಗುತ್ತಿರುವ ಪಂಚಮಿ ಅಪ್ಪಟ ಗ್ರಾಮೀಣ ಪ್ರತಿಭೆ. ಈಕೆಯ ಯಶೋಗಾಥೆಯನ್ನು ನಾಡು ಕೊಂಡಾಡುತ್ತಿದೆ

ಬಹುಮುಖ ಬಾಲಪ್ರತಿಭೆಯಾದ ಪಂಚಮಿ ಮಾರೂರು ಭಾರತ ಸರ್ಕಾರ ಮಹಿಳಾ ಹಾಗೂ ಶಿಶು ಅಭಿವೃದ್ಧಿ ಇಲಾಖೆ ರಾಷ್ಟ್ರಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯೂ ಮಕ್ಕಳ ದಿನಾಚರಣೆಗೆ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.[ಸಿಂಗಪುರದಲ್ಲಿ ಕನ್ನಡ ಹುಡುಗಿಯ ಅಪರೂಪದ ಸಾಧನೆ]

Panchami Maruru is the grate talented girl at Moodabidri, Mangaluru

ಪಂಚ ಕ್ಷೇತ್ರ ಸಾಧಕಿ :

ಯಕ್ಷಗಾನ, ನೃತ್ಯ, ಸಂಗೀತ, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪಂಚಮಿ ಮೂಡುಬಿದರೆ ಜೈನ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ 8 ವರ್ಷಗಳಿಂದ ನಿರಂತರವಾಗಿ 5 ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಅರಳಿಸಿ ಜನಮನ್ನಣೆ ಗಳಿಸಿದ್ದಾಳೆ. ಯಕ್ಷಗಾನದಲ್ಲಿ 100 ಪ್ರದರ್ಶನ ನೀಡಿರುವ ಈಕೆ, ನೃತ್ಯ ವೈಭವ ಸೇರಿ 700 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾಳೆ.

ಕಿರುತೆರೆಯ ಪ್ರತಿಭಾನ್ವೇಷಣಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪ್ರಶಂಸೆಗೆ ಪಾತ್ರರಾಗಿದ್ದಾಳೆ. ಝೀ ಕನ್ನಡ ಕುಣಿಯೋಣ ಬಾರಾದಲ್ಲಿ ಭಾಗವಹಿಸಿ ಬೆಸ್ಟ್ ಎಕ್ಸ್ಪ್ರೆಶನ್ ಅವಾರ್ಡ್, ಸುವರ್ಣ ವಾಹಿನಿಯ ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ನೃತ್ಯ ಮಾಡಿ ಮುದ್ದಿನ ಪುಟಾಣಿ ಪ್ರಶಸ್ತಿಯನ್ನೂ ಗಳಿಸಿದ್ದಾಳೆ. ಝೀ ಕನ್ನಡ ವಾಹಿನಿಯ ಸೂಪರ್ ಗುರು, ಸೂಪರ್ ಶಿಷ್ಯ, ಉದಯ ಟಿ.ವಿಯ ರಿಯಾಲಿಟಿ ಶೋ.ನಲ್ಲೂ ತನ್ನ ಪ್ರತಿಭೆ ತೋರಿಸಿದ್ದಾಳೆ.[ಕಲೆಯಲ್ಲಿ ಅರಳಿದ ಧಾರವಾಡದ ಪ್ರತಿಭೆ ಶಶಿಕಲಾ]

ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಾತ್ರವಲ್ಲದೇ ಶೈಕ್ಷಣಿಕವಾಗಿಯೂ ಸಾಧನೆ ಮಾಡಿರುವ ಈಕೆ, ಡಿ.ಜೆ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಶೇ.99 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಭರತನಾಟ್ಯ, ಯಕ್ಷಗಾನ ಕ್ಷೇತ್ರದಲ್ಲಿ ಅರಳು ಪ್ರತಿಭೆಯಾಗಿರುವ ಈಕೆ ಕ್ರೀಡಾಪಟುವೂ ಹೌದು. ಹಾಕಿ, ಫುಟ್ಬಾಲ್, ವಾಲಿಬಾಲ್, ಶಾರ್ಟ್ ಪುಟ್ ನಲ್ಲಿ ಭಾಗವಹಿಸಿ, ಸಾಧನೆ ಮಾಡುತ್ತಿದ್ದಾಳೆ. ಈಕೆ ಜೈನ ಪ್ರೌಢಶಾಲೆಯ ಎನ್ ಸಿಸಿ ಆರ್ಮಿ ವಿಭಾಗದ ಕೆಡೆಟ್. ರಾಜ್ಯಮಟ್ಟದ 150ಕ್ಕೂ ಅಧಿಕ ಸಂಘ ಸಂಸ್ಥೆಗಳು ಈಕೆಯ ಸಾಧನೆ ಗುರುತಿಸಿ ಗೌರವಿಸಿದೆ.

Panchami Maruru is the grate talented girl at Moodabidri, Mangaluru

ಕೌಟುಂಬಿಕವಾಗಿ ಕಲೆಯ ಹಿನ್ನಲೆಯಿಲ್ಲದ ಪಂಚಮಿಗೆ ಟೆಂಪೋ ಡ್ರೈವರ್ ವೃತ್ತಿ ಮಾಡುತ್ತಿರುವ ತಂದೆ ಪಾಶ್ರ್ವನಾಥ ಹಾಗೂ ತಾಯಿ ಗೃಹಿಣಿ ದೀಪಶ್ರೀ ಅವರ ನಿರಂತರ ಪ್ರೋತ್ಸಾಹ ಈಕೆಯ ಸಾಧನೆಗೆ ಬೆನ್ನೆಲುಬು. ಸುಧೇಶ್ ಜೈನ್ ಮಕ್ಕಿಮನೆ ಈಕೆಗೆ ರಿಯಾಲಿಟಿ ಶೋ, ವೇದಿಕೆ ಪ್ರದರ್ಶನಗಳನ್ನು ನೀಡಲು ಮಾರ್ಗದರ್ಶಕರಾಗಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆಯಲು ಬೇಕಾದ ತಾಂತ್ರಿಕ ಕೆಲಸಗಳನ್ನೂ ಕೂಡ ಸುಧೇಶ್ ನಿರ್ವಹಿಸಿದ್ದಾರೆ.[ಇಂಗ್ಲೀಷ್ ಮೇಲೆ ದಿಗ್ವಿಜಯ ಸಾಧಿಸಿದ ಮಕ್ಕಳಿಬ್ಬರ ಕಥೆ]

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಗಳು ನವೆಂಬರ್ 14 ಮಕ್ಕಳ ದಿನಾಚರಣೆಯಲ್ಲಿ ಎರಡೂ ಪ್ರಶಸ್ತಿ ಸ್ವೀಕರಿಸಲಿದ್ದಾಳೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವ ಇರಾದೆ ಪಂಚಮಿಯದ್ದಾಗಿದೆ

English summary
Panchami is the grate talented girl at Moodabidri, Mangaluru. She is achieved in 5 fields like Yakshagana, Dance, Music, Sports and Education and performance 100 Yakshagana more than 700 programmes. Panchami is the student of Jain High School, Moodabidri. she participated in many Television reality shows. Pasnchami is taking State level award on November 14th. Totally her talent is enlighten the all over Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X