ಗಣರಾಜೋತ್ಸವ ಪರೇಡ್ ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪಂಚಮಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 23 : ಯಕ್ಷಗಾನ, ನೃತ್ಯ, ಸಂಗೀತ, ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರ ಹೀಗೆ ಪಂಚಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿ ನಾಡಿನಾದ್ಯಂತ ತನ್ನ ಕೀರ್ತಿ ಬೆಳಗುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಈ ಪಂಚಮಿ, ಈ ಬಾರಿಯ ಜನವರಿ 26ರಂದು ದೆಹಲಿಯಲ್ಲಿ ನೆಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭೂದಳದ ಎನ್ ಸಿ ಸಿ ಶಿಬಿರಕ್ಕೆ ಆಯ್ಕೆಯಾಗಿದ್ದಾಳೆ.

Panchami Maruru from Moodabidri march at republic day parade delhi on january 26

ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಮೂಡುಬಿದಿರೆ ಜೈನ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಪಂಚಮಿ ಮಾರೂರು, ಮೂಡುಬಿದಿರೆ ಮರುರೂ ಪಾಶ್ವ೯ನಾಥ ಮತ್ತು ದೀಪಾಶ್ರೀ ಅವರ ಪುತ್ರಿ. ಕರ್ನಾಟಕ ಬೆಟಾಲಿನ್ ನಿಂದ ಆಯ್ಕೆಗೊಂಡ ಏಕ್ಕೆಕ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ.[2017 ಗಣರಾಜೋತ್ಸವ ಪರೇಡ್ ನಲ್ಲಿ ಮಂಗ್ಳೂರಿನ ನಿಷೆಲ್]

Panchami Maruru from Moodabidri march at republic day parade delhi on january 26

ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾ ಬಹುಮಾನ ಹಾಗೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಾ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಇವರು ರಾಷ್ಟ್ರೀಯ ಕ್ಯಾಡೆಟ್ ಕೋರ್‌ನ (ಎನ್‌ಸಿಸಿ) ಭೂ ದಳದವರಾಗಿದ್ದು, ಈ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದ ವಿವಿಧ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಚಮಿ ಪ್ರತಿಯೊಂದು ಯಶಸ್ಸಿನ ಕಥೆಯ ಹಿಂದೆ ಶ್ರಮ, ಉತ್ಸಾಹ, ಏಕಾಗ್ರತೆ ಮತ್ತು ಸ್ಥಿರ ಗುರಿ ಇರುವುದರಿಂದಲೇ ಯಶಸ್ಸಿನ ಪಥ ಮುಟ್ಟಲು ಸಾಧ್ಯ ಎಂದರು.

Panchami Maruru from Moodabidri march at republic day parade delhi on january 26

ಇನ್ನು ಇವರ ಪ್ರತಿಭೆಗೆ 2015ರಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ದೊರಕಿದೆ. ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಮೂಡುಬಿದಿರೆಯ ಸಣ್ಣ ಹಳ್ಳಿಯಾದ ಮಾರೂರು ಹೆಸರನ್ನು ಭಾರತದಲ್ಲಿ ಗುರುತಿಸುವಂತೆ ಮಾಡಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ನಿಷೆಲ್ ಅಲ್ಮೇಡಾ ಹಾಗು ಪಂಚಮಿ ಮಾರೂರು ಆಯ್ಕೆಯಾಗಿರುವುದು ನಿಜಕ್ಕೂ ಸಂತಸ ಸಂಗತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Panchami Maruru from Moodabidri to march at Republic Day parade in Delhi on January 26.Panchami a class 9 student of Jain High School Moodabidri, Mangaluru.
Please Wait while comments are loading...