ಪೊಲೀಸ್ ಪೇದೆಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 9: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಗೊಳಪಡುವ ಕಸಬ ಬೆಂಗರೆಯ ಮಹಿಳೆಯೊಬ್ಬರಿಗೆ ಪೊಲೀಸ್ ಪೇದೆಯೋರ್ವ ಲೈಂಗಿಕ ಕಿರುಕುಳ ನೀಡುತ್ತಿದ್ದು ಆತನನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.

ಬೆಂಗರೆಯ ವಿವಾಹಿತ ಮಹಿಳೆಯೊಬ್ಬರನ್ನು ವಿಚಾರಣೆಯ ನೆಪದಲ್ಲಿ ಪಣಂಬೂರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ವಿನಯ್ ಎಂಬವವರು ಕಳೆದ ಸೋಮವಾರದಿಂದ ಮೊಬೈಲ್ ಮೂಲಕ ಸಂಪರ್ಕಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.[ಕೆಲಸ ಕೊಡಿಸುವುದಾಗಿ ವೇಶ್ಯಾವಾಟಿಕೆಗೆ ದೂಡಲು ಯತ್ನ, ಬಂಧನ]

crime

ಈ ಬಗ್ಗೆ ಮಹಿಳೆ ಸ್ಥಳೀಯ ಡಿವೈಎಫ್ ಐ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಅದರಂತೆ ವಿನಯ್ ನ ಫೋನ್ ಕರೆಗಳನ್ನು ರೆಕಾರ್ಡ್ ಮಾಡಿ ಬುಧವಾರ ಪೊಲೀಸ್ ಆಯುಕ್ತ ಚಂದ್ರಶೇಖರ್‌ಗೆ ದೂರು ನೀಡಲಾಯಿತು.

ತಕ್ಷಣ ಆಯುಕ್ತರು, ಉಪಾಯುಕ್ತರು ಮತ್ತು ಮಹಿಳಾ ಇನ್‌ಸ್ಪೆಕ್ಟರ್ ರಿಗೆ ಸೂಚನೆ ನೀಡಿದರು. ಮಹಿಳೆ ನೀಡಿದ ದೂರಿನಂತೆ ಪಣಂಬೂರು ಠಾಣೆಯ ಪೊಲೀಸರ ವಿರುದ್ಧ ಬುಧವಾರ ದೂರು ನೀಡಿದರು. ಸೆ.364 (ಎ) ಮತ್ತು ಸೆ.364 (ಡಿ)ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Mangaluru police commissioner has ordered suspension of a police constable of Panambur police station for alleged sexual harassment of a woman in Kasaba Bengre.
Please Wait while comments are loading...