ಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್ 7: ತಾಳೆ ಬೆಲ್ಲ ಬಹಳ ಔಷಧೀಯ ಗುಣಗಳನ್ನು ಹೊಂದಿದೆ. ಈ ಕಾರಣದಿಂದಲೇ ಈ ಬೆಲ್ಲವನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಾಳೆ ಬೆಲ್ಲ ಕೊಂಡುಕೊಳ್ಳಬೇಕೆಂದರೆ ಎಲ್ಲೆಲ್ಲೋ ಹುಡುಕಾಡಬೇಕಾಗಿದೆ. ಆದರೆ ಈಗ ಈ ಹುಡುಕಾಟಕ್ಕೆ ತೆರೆ ಎಳೆಯುವುದಕ್ಕಾಗಿಯೋ ಅನ್ನುವಂತೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಬೆಲ್ಲದೊಂದಿಗೆ ದ.ಕ, ಉಡುಪಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ.

ನಗರದ ಕುಲಶೇಖರ, ನಂತೂರು, ಪಡೀಲ್, ಕಣ್ಣೂರು, ಅಡ್ಯಾರು, ಪರಂಗಿಪೇಟೆ ಮುಂತಾದೆಡೆ ಈ ತಾಳೆ ಬೆಲ್ಲ ಮಾರಾಟವಾಗುತ್ತಿದೆ.[ಮೂಡಬಿದ್ರೆ: ಬ್ಲೂಸ್ ಚಾಕಲೇಟಿನಲ್ಲಿ ಸಿಕ್ತು ಜೀವಂತ ಹುಳು]

Palm jaggery sellers from Tamilnadu now enter mangaluru

ತಮಿಳುನಾಡಿನಿಂದ ಬಂದಿರುವ ಔಷಧಿಯ ಗುಣ ಹೊಂದಿರುವ ಈ ತಾಳೆಬೆಲ್ಲಕ್ಕೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಅಲಲ್ಲಿ ಅಪರೂಪಕ್ಕೆ ಕಾಣ ಸಿಗುವ ಬೆಲ್ಲವನ್ನು ಖರೀದಿಸುವವರಿದ್ದಾರೆ. ತಮಿಳುನಾಡಿನ ಗುಡಿ ಕೈಗಾರಿಕೋದ್ಯಮಿಗಳು ತಾವು ತಯಾರಿಸಿದ ಸಾಂಪ್ರದಾಯಿಕ ಬೆಲ್ಲ ಮಾತ್ರವಲ್ಲದೆ ಕಾಳು ಮೆಣಸು , ಶುಂಟಿ ಮಿಶ್ರಿತ ಬೆಲ್ಲವನ್ನೂ ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದಾರೆ.

Palm jaggery sellers from Tamilnadu now enter mangaluru

ಬೆಲ್ಲ ಸವಿಯ ಬಯಸುವವರು ನೇರವಾಗಿ ,ಮಾರಾಟಗಾರರ ಬಳಿ ಸಾಗಿ ಬೆಲ್ಲ ಖರೀದಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದಲ್ಲದೆ ಈ ಬೆಲ್ಲದ ಮಾರಾಟಗಾರರು ಉಭಯ ಜಿಲ್ಲೆಗಳಲ್ಲಿ ಬೆಲ್ಲ ಮಾರಿ ಲಾಭವನ್ನು ಕಂಡುಕೊಳ್ಳುತ್ತಿದ್ದಾರೆ.

Palm jaggery sellers from Tamilnadu now enter mangaluru

ಓಲೆಬೆಲ್ಲದ ತಯಾರಿಕೆ:
ತಮಿಳುನಾಡಿನ ತಿರುಚಂದೂರು ಅನ್ನುವ ಗ್ರಾಮಕ್ಕೆ ಸೇರಿದ ಗುಡಿ ಕೈಗಾರಿಕೋದ್ಯಮಿಗಳು ಬೆಲ್ಲ ತಯಾರಿಕೆಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ. ಈ ಬೆಲ್ಲವನ್ನು ತಾಳೆ, ತೆಂಗು, ಈಚಲು ಮರದಿಂದ ಅಲ್ಪ ಪ್ರಮಾಣದಲ್ಲಿ ಸುಣ್ಣ ಬೆರೆಸಿದ ಶೇಂದಿ ತೆಗೆದು ಅದನ್ನು ಮನೆಯಲ್ಲಿ ಬಾಣಲೆಗೆ ಸುರಿದು 4 ರಿಂದ 5 ಗಂಟೆಗಳ ಕಾಲ ಕುದಿಸಾಲಾಗುತ್ತದೆ. ಬಳಿಕ ಅದು ಕಂದು ಬಣ್ಣಕ್ಕೆ ಬದಲಾಯಿಸಿ, ದಪ್ಪವಾದಾಗ ಒಲೆಯಿಂದ ತೆಗೆದು ಬೆಲ್ಲದ ಅಚ್ಚಿಯಲ್ಲಿ ಸುರಿಯಲಾಗುತ್ತದೆ. ಸುಮಾರು 3 ಗಂಟೆಗಳ ಬಳಿಕ ಸೂಕ್ಷ್ಮವಾಗಿ ಬೇರ್ಪಡಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ತಯಾರಿಸಿದ ಬೆಲ್ಲವನ್ನು ತಮಿಳುನಾಡಿಗೆ ಮಾತ್ರ ಸೀಮಿತವಾಗಿಡದೆ ಈ ಕೈಗಾರಿಕೋದ್ಯಮಿಗಳು ವ್ಯಾವಹಾರಿಕ ದೃಷ್ಟಿಯನ್ನು ಬೇರೆ ರಾಜ್ಯಗಳತ್ತ ಹರಿಸಿದ್ದಾರೆ. ಎಲ್ಲೆಲ್ಲಿ ಈ ಬೆಲ್ಲವನ್ನು ಇಷ್ಟ ಪಡುತ್ತಾರೆ ಅಲ್ಲಲ್ಲಿ ವ್ಯವಹಾರ ವಹಿವಾಟುಗಳನ್ನು ವಿಸ್ತರಿಸುತ್ತಾ ಬರುತ್ತಿದ್ದಾರೆ.

Palm jaggery sellers from Tamilnadu now enter mangaluru

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Palm jaggery sellers from Tamilnadu now enter mangaluru for their business. Peoplethrong to buy sweet jaggery at different parts of the city.
Please Wait while comments are loading...