ಮಳೆ ನೀರಿಗಾಗಿ ಕಟ್ಟಿದ್ರಾ ಪಡೀಲ್-ಬಜಾಲ್ ರೈಲ್ವೆ ಅಂಡರ್‌ ಪಾಸ್?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜೂನ್ 20 : ಕಂಕನಾಡಿ ರೈಲ್ವೆ ನಿಲ್ದಾಣದ ಬಳಿ ಇರುವ ಪಡೀಲ್-ಬಜಾಲ್ ರೈಲ್ವೆ ಕೆಲ ಸೇತುವೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಮುಂದುವರಿದಿದೆ. ಇಲ್ಲಿ ಶೇಖರಣೆಗೊಳ್ಳುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ, ಮಳೆ ಬಂದರೆ ಕೆಸರು ನೀರಿನಲ್ಲಿಯೇ ವಾಹನಗಳು ಸಂಚಾರ ನಡೆಸಬೇಕಾಗಿದೆ.

ಬಸ್ಸು, ಲಾರಿಗಳಂತಹ ವಾಹನಗಳ ಚಕ್ರಗಳು ಮುಳುಗುವಷ್ಟು ನೀರು ಕೆಳ ಸೇತುವೆಯಲ್ಲಿ ಸಂಗ್ರಹವಾಗುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳು, ಕಾರು, ಲಘು ವಾಹನಗಳು ಈ ಅಂಡರ್‌ಪಾಸ್‌ನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. [ಪಡೀಲ್ ಅಂಡರ್ ಪಾಸ್ ಕುಸಿತ, ಕಾರ್ಮಿಕ ಬಲಿ]

padil-bajal road underpass

ಬಜಲ್, ಜಲ್ಲಿಗುಡ್ಡೆ, ವೀರನಗರ, ಕರ್ಮಾರ್ ಪ್ರದೇಶಗಳ ಸಾವಿರಾರು ಜನರು ನಗರದ ಕಡೆಗೆ ಸಂಚರಿಸಲು ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಈ ರಸ್ತೆಯಲ್ಲಿ 13 ಬಸ್ಸುಗಳು ಸಂಚರಿಸುತ್ತಿದ್ದು, ಪ್ರತಿ 5ನಿಮಿಷಕ್ಕೊಂದು ಬಸ್ ಓಡಾಡುತ್ತವೆ. [ರಸ್ತೆ ಗುಂಡಿ ಮುಚ್ಚಿದ ಮಹಿಳಾ ಹೋಂಗಾರ್ಡ್]

ಆದರೆ, ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಳ್ಳುವುದರಿಂದ ಎಲ್ಲಾ ವಾಹನಗಳು ಬಜಾಲ್-ಎಕ್ಕೂರ್ ಮಾರ್ಗವಾಗಿ ಅಥವಾ ವೀರ ನಗರ-ಕಣ್ಣೂರು ರಸ್ತೆ ಮೂಲಕ ಸುತ್ತು ಹಾಕಿಕೊಂಡು ನಗರ ಪ್ರವೇಶಿಸುವುದು ಅನಿವಾರ್ಯ ವಾಗಿದೆ.

ಕುಂಟುತ್ತಿದೆ ಕಾಮಗಾರಿ : ಪಡೀಲ್-ಬಜಾಲ್ ರೈಲ್ವೇ ಕೆಳ ಸೇತುವೆಯು ಸ್ಥಳೀಯ ಜನರ ಬಹುಕಾಲದ ಬೇಡಿಕೆಯಾಗಿತ್ತು. ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರು 2014ರ ಆಗಸ್ಟ್‌ನಲ್ಲಿ ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. 5.61 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. 2014ರ ಡಿಸೆಂಬರ್‌ನಲ್ಲಿ ಇಲ್ಲಿ ಕಾಮಗಾರಿ ಸ್ಥಳದಲ್ಲಿ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Civic authority fail to stop the waterlogging at the Padil-Bajal railway under bridge, Mangaluru. Every time it rains in the city, vehicles get struck at the underpass. The foundation was laid on August 16, 2014 for project. But, It not completed.
Please Wait while comments are loading...