'ಕಾವ್ಯ ಸಾವಿನ ಪ್ರಕರಣದಲ್ಲಿ ಮೋಹನ್ ಆಳ್ವಾರ ತೇಜೋವಧೆ ಸರಿಯಲ್ಲ'

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 10 : ಕಾವ್ಯ ಪೂಜಾರಿ ಆತ್ಮಹತ್ಯೆಗೆ ಬೆಂಬಲವಾಗಿ ನಿಂತಿರುವ ಕೆಲವು ಸಂಘಟನೆಗಳು ನಾಟಕೀಯವಾಗಿ ನಿಂತಿವೆ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಆರೋಪಿಸಿದ್ದಾರೆ.

ಕಾವ್ಯ ಪ್ರಕರಣ ಪಾರದರ್ಶಕ ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಗುರುವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾವ್ಯ ಸಾವು ಕೇವಲ ಆಕೆಯ ಪೋಷಕರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ನೋವು ತಂದ ವಿಚಾರವಾಗಿದೆ. ಈ ಸಾವು ಅನಿರೀಕ್ಷಿತವೋ, ಅಥವಾ ಪೂರ್ವಯೋಜಿತವೋ ಎನ್ನುವ ಕಪೋಲಕಲ್ಪಿತ ವರದಿಗಳನ್ನು ಕೆಲವು ಮಾಧ್ಯಮಗಳು ಹಾಗೂ ಸಂಘ-ಸಂಸ್ಥೆಗಳು ಮಾಡುವ ಮೂಲಕ ಮೋಹನ್ ಆಳ್ವಾ ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ" ಎಂದರು.

Organisations supporting kavya poojary suicide are just making drama-Amarnath shetty

ಘಟನೆಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲು ಸಹಕರಿಸುವಂತೆ ಆಳ್ವಾರು ಈಗಾಗಲೇ ತಿಳಿಸಿರುವಾಗ ಮತ್ತೆ-ಮತ್ತೆ ಆಳ್ವಾರ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Kavya Poojary Demise :Special Investigation Team Received PostMortem Report

ಆಳ್ವಾರ ತೇಜೋವಧೆಗೆ ಮುಂದಾಗಿರುವುದನ್ನು ಖಂಡಿಸಿ ಮೋಹನ್ ಆಳ್ವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಬೃಹತ್ ಸಭೆಯನ್ನು ಆಗಸ್ಟ್ 12ರಂದು (ಶನಿವಾರ) ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಸಲುತೀರ್ಮಾನಿಸಲಾಗಿದ್ದು, ಎಲ್ಲಾ ವರ್ಗದ ಜನ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Organisations supporting kavya poojary suicide are just making drama in the name of kavya poojary said former minister Amarnath shetty here at a press meet on Aug 10.
Please Wait while comments are loading...