ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಈ ಸುದ್ದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್, 22: ಶ್ರೀ ಕ್ಷೇತ್ರ ಮಂಜುನಾಥನ ಸನ್ನಿಧಿ ಧರ್ಮಸ್ಥಳ ಸಹ ಆನ್ ಲೈನ್ ರೂಂ ಬುಕಿಂಗ್ ವ್ಯವಸ್ಥೆಗೆ ಒಳಪಟ್ಟಿದೆ. ಭಕ್ತರಿಗೆ ವಸತಿ ಹೊರೆ ಕಡಿಮೆ ಮಾಡಲು ಆನ್‌ಲೈನ್‌ನಲ್ಲೇ ರೂಂ ಕಾಯ್ದಿರಿಸುವ ವಿನೂತನ ಸೌಲಭ್ಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ.

ದೂರದಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶ್ರೀಕ್ಷೇತ್ರದ ಅಧಿಕೃತ ವೆಬ್‌ಪೇಜ್‌ನಲ್ಲಿ ಈ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಧರ್ಮಸ್ಥಳದಲ್ಲಿರುವ ರಜತಾದ್ರಿ ವಸತಿಗೃಹದ 110 ರೂಮ್‌ಗಳ ಬುಕಿಂಗ್ ಗೆ ಆನ್‌ಲೈನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.[ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯ ಬದಲಾವಣೆ]

Online room booking facility in Dharmasthala

ರೂಂ ಕಾಯ್ದಿರಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ರೂಂ ಕಾಯ್ದಿರಿಸಲು ಭಕ್ತರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕೃತ ವೆಬ್‌ಪೇಜ್ http://www.shridharmasthala.org ಗೆ ಲಾಗಿನ್ ಆಗಿ ಸೂಕ್ತ ವಿವರಗಳನ್ನು ಭರ್ತಿ ಮಾಡಬೇಕು. ಮಾಡಿದ ಬಳಿಕ ಬುಕಿಂಗ್ ಕುರಿತಾದ ದೃಢೀಕರಣ ಪತ್ರ ಇ-ಮೇಲ್ ಮೂಲಕ ಬುಕ್ ಮಾಡಿದವರಿಗೆ ತಲುಪುತ್ತದೆ.[ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಧರ್ಮಸ್ಥಳದ ಪಾಕಶಾಲೆ]

ಬುಕ್ ಮಾಡಿದ ದಿನಾಂಕದ ವೇಳಗೆ ಈ ಪ್ರತಿಯನ್ನು ಶ್ರೀಕ್ಷೇತ್ರಕ್ಕೆ ಬಂದು ವಸತಿಗೃಹದಲ್ಲಿ ತೋರಿಸಿ ರೂಂ ಪಡೆಯಬಹುದು. ಮುಂದಿನ ದಿನಗಳಲ್ಲಿ ರೂಂ ಬುಕ್ಕಿಂಗ್ ಹಣ ಪಾವತಿಗೂ ಆನ್‌ಲೈನ್‌ನಲ್ಲೇ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The administration of Dharmasthala, the popular pilgrimage centre, has launched online room booking facility for pilgrims on its website. Dharmadhikari D. Veerendra Heggade launched the website http://www.shridharmasthala.org on Sunday 21 August 2016.
Please Wait while comments are loading...