ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿಯ ತುಂಡು ಸಿಲುಕಿ ಮಗು ಸಾವು

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 31: ಗಂಟಲಲ್ಲಿ ಚಕ್ಕುಲಿಯ ತುಂಡು ಸಿಲುಕಿ ಮಗು ಮೃತಪಟ್ಟ ಅಚ್ಚರಿಯ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ.

ಇಲ್ಲಿಯ ಸ್ಥಳೀಯ ನಿವಾಸಿ ವಿಠಲ್ ಎಂಬುವರ ಮಗು ಆರುಷ್ ಗೆ ನಿನ್ನೆ ಸಂಜೆ ಚಕ್ಕುಲಿಯ ತುಂಡನ್ನು ತಿನ್ನಲು ಕೊಡಲಾಗಿತ್ತು. ಏನು ಅರಿಯದ ಒಂದು ವರ್ಷದ ಮಗು ಆರುಷ್ ಚಕ್ಕುಲಿ ತುಂಡನ್ನು ಬಾಯಿಯಲ್ಲಿ ಹಾಕಿಕೊಂಡಿದ್ದ.

One year baby dies after Chakkuli stuck in throat

ಈ ಸಂದರ್ಭದಲ್ಲಿ ಚಕ್ಕುಲಿಯ ತುಂಡು ಆರುಷ್ ಗಂಟಲಲ್ಲಿ ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಗು ಆರುಷ್ ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಮಗು ಅಸ್ವಸ್ಥಗೊಂಡಿರುವುದನ್ನು ನೋಡಿ ವಿಠಲ್ ದಂಪತಿ ತಕ್ಷಣ ಮಗುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರುಷ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident a one year old baby died when a Chakkuli stuck in the throat here in Belthangady of Dakshina Kannada district on October 30.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ