ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಡಿಪಿಐ ಅಶ್ರಫ್ ಕೊಲೆ: ಪ್ರಮುಖ ಆರೋಪಿ ದಿವ್ಯರಾಜ್ ಬಂಧನ

|
Google Oneindia Kannada News

ಮಂಗಳೂರು, ಜೂನ್ 26: ಬೆಂಜನಪದವಿನ ಎಸ್‌ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಲ್ಲಿ ಓರ್ವ ನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ದಿವ್ಯರಾಜ್ ಶೆಟ್ಟಿ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ ಭರತ್ ಕುಮ್ಡೇಲು ಮತ್ತು ದಿವ್ಯರಾಜ್ ಶೆಟ್ಟಿ ಕೊಲೆಗೆ ಸಂಚು ರೂಪಿಸಿದವರು ಎನ್ನಲಾಗಿದೆ.

SDPI ಮುಖಂಡನ ಹತ್ಯೆ: ಐವರು ಆರೋಪಿಗಳ ಬಂಧನSDPI ಮುಖಂಡನ ಹತ್ಯೆ: ಐವರು ಆರೋಪಿಗಳ ಬಂಧನ

One prime accused taken into police custody in SDPI Ashraf murder case

ಅಶ್ರಫ್ ಕೊಲೆಗೆ ಸಂಚು ರೂಪಿಸಲು ಆರೋಪಿಗಳ ತಂಡ ಒಂದು ತಿಂಗಳ ಹಿಂದೆ ಹಲವೆಡೆಗಳಲ್ಲಿ ಚರ್ಚಿಸಿ ಅಶ್ರಫ್‌ನ ಬಗ್ಗೆ ಮಾಹಿತಿಯನ್ನು ಕಲೆ ಹಾಕಿವೆ. ಬಳಿಕ ಜೂ. 21ರಂದು ಅಶ್ರಫ್ ಬೆಂಜನಪದವಿಗೆ ಬಂದಿರುವ ಮಾಹಿತಿಯನ್ನು ಖಚಿತಪಡಿಸಿಕೊಂಡು ತಲವಾರು ಸಹಿತ ಮಾರಕಾಸ್ತ್ರಗಳಿಂದ ಬೆಂಜನಪದವಿಗೆ ಆಗಮಿಸಿ ಅಶ್ರಫ್‌ರವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಬಂಟ್ವಾಳ: SDPI ಮುಖಂಡನ ಬರ್ಬರ ಹತ್ಯೆಬಂಟ್ವಾಳ: SDPI ಮುಖಂಡನ ಬರ್ಬರ ಹತ್ಯೆ

ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಮ್ಡೇಲು ನಿವಾಸಿಗಳಾದ ಪವನ್ ಕುಮಾರ್ ಯಾನೆ ಪುಂಡ (24), ರಂಜಿತ್ (28), ತುಂಬೆಯ ಕನೆಮಾರು ಮನೆ ನಿವಾಸಿ ಸಂತೋಷ್ ಯಾನೆ ಸಂತು (23), ತುಂಬೆಯ ಬೊಳ್ಳಾರಿ ನಿವಾಸಿ ಶಿವಪ್ರಸಾದ್ ಆನೆ ಶಿವು (24), ತೆಂಕಬೆಳ್ಳೂರಿನ ಅಭಿನ್ ರೈ ಯಾನೆ ಅಭಿ (23) ಬಂಧಿತ ಆರೋಪಿಗಳಾಗಿದ್ದಾರೆ.

ಇದೀಗ ಕೊಲೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದಂತಾಗಿದೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಭರತ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

English summary
One prime accused taken into police custody in SDPI Ashraf murder case. The prime accused is identified as Divyaraj Shetty who has been taken into custody for interrogation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X