ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ರಾಷ್ಟ್ರಮಟ್ಟದ ರಂಗ ತರಬೇತಿ ಶಿಬಿರ

|
Google Oneindia Kannada News

ಮಂಗಳೂರು, ಸೆ. 11 : ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜು ಕನ್ನಡ ಸಂಘ ಮತ್ತು ಜರ್ನಿ ಥಿಯೇಟರ್‌ ಸಹಯೋಗದಲ್ಲಿ ಸೆಪ್ಟಂಬರ್‌ 13, ಶನಿವಾರ ಒಂದು ದಿನದ ರಾಷ್ಟ್ರಮಟ್ಟದ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರ ಬೆಳಗ್ಗೆ 9 ರಿಂದ ಸಂಜೆ 4.30ರವೆಗೆ ನಡೆಯಲಿದೆ. ರಂಗ ತರಬೇತಿ ಶಿಬಿರವನ್ನು ಸಂತ ಅಲೋಶಿಯಸ್‌ ಕಾಲೇಜು ಪ್ರಾಚಾರ್ಯ ರೆ,ಫಾ.ಸ್ವೀಬರ್ಟ್ ಡಿಸಿಲ್ವಾ ಉದ್ಘಾಟಿಸಲಿದ್ದಾರೆ. ರಂಗ ನಿರ್ದೇಶಕ ಮೋಹನ್‌ ಚಂದ್ರು ಕಾರ್ಯಕ್ರಮದಲ್ಲಿ ಹಾಜರಿರುವರು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.(ನಿವೃತ್ತ ಶಿಕ್ಷಕರ ಸಮಾಜ ಸೇವೆಗೆ ಸಲಾಂ!)

mangalore

ರಂಗಕರ್ಮಿ ಸುರೇಶ್‌ ಬಾಳಿಲ, ವಿದ್ದು ಉಚ್ಚಿಲ್ ನೇತೃತ್ವದಲ್ಲಿ ಜರ್ನಿ ಥಿಯೇಟರ್‌ ತಂಡದವರು ಹಲವಾರು ನಾಟಕ ಪ್ರಯೋಗಗಳ ಪ್ರಾತಕ್ಷಿಕೆ ನೀಡಲಿದ್ದಾರೆ. ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.

ಸೆ. 13ರಂದು ಮಧ್ಯಾಹ್ನ 3 ಮತ್ತು ಸಂಜೆ 6 ಗಂಟೆಗೆ ಎಚ್‌.ಎಸ್‌.ವೆಂಕಟೇಶ್‌ಮೂರ್ತಿ ರಚನೆಯ 'ಊರ್ಮಿಳೆ' ಎಂಬ ಏಕವ್ಯಕ್ತಿ ನಾಟಕವನ್ನು ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಮಂಜುಳಾ ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ
ಲಾರೆನ್ಸ್‌ ಪಿಂಟೋ (9844182085), ಭವ್ಯಾ ಶೆಟ್ಟಿ(9880944119), ಗಿರೀಶ್‌ (9845804806), ಸುಧಾ ಕುಮಾರಿ (8762205219) ಅವರನ್ನು ಸಂಪರ್ಕಿಸಬಹುದು.

English summary
The JOURNEY THEATRE group Mangalore, in collaboration with the Kannada Sangha and Dramatics Association of St. Aloysis College (Autonomous), is organizing a one-day National Level Theatrics workshop on 13 September 2014 ,Saturday, at the college auditorium from 9:30 AM to 4:30 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X