ಗೆಳತಿಯ ಮದುವೆಗೆಂದು ಹೊರಟವರು ಹೆಣವಾದರು

By: ಮಂಗಳೂರು ಪ್ರತಿನಧಿ
Subscribe to Oneindia Kannada

ಉಪ್ಪಿನಂಗಡಿ, ಅಕ್ಟೋಬರ್. 24:ಗೆಳತಿಯ ಮದವೆಗೆಂದು ಹೋರಟವರು ಭಾನುವಾರ ಕಡಬ ಸಮೀಪ ಸುಂಕದಕಟ್ಟೆ ಎಂಬಲ್ಲಿ ಓಮ್ನಿ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಮಶಾನ ಸೇರಿದ್ದಾರೆ.

ಲಕ್ಷ್ಮೇಶ್ (17) ಮತ್ತು ಶ್ರೇಯಸ್(17) ಮೃತ ದುರ್ದೈವಿಗಳು. ಇವರು ತಮ್ಮ ಗೆಳತಿಯೊಬ್ಬಳ ಮದುವೆಗೆಂದು ಶಿವವೊಗ್ಗದ ಎನ್ಆರ್ ಪುರಕ್ಕೆ ಹೊರಟ್ಟಿದ್ದರು. ಹೋಗುವ ಮಾರ್ಗಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಯುವಕರು ಕಡಬದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿವ್ಯಾಸಾಂಗ ಮಾಡುತ್ತಿದ್ದವಿದ್ಯಾರ್ಥಿಗಳು ಎನ್ನಲಾಗಿದೆ.

accident

ಅಪಘಾತದ ತೀವ್ರತೆಗೆ ಬೈಕ್ ಮಾರು ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿದಿದ್ದು. ಇನ್ನೊಬ್ಬ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದಾನೆ.

ಲಕ್ಷ್ಮೇಶ್ ಕಡಬದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿಗೆ ಪರೀಕ್ಷೆ ಬರೆಯಲು ಕೋಚಿಂಗ್ ಪಡೆಯುತ್ತಿದ್ದ. ಹಾಗೂ ಶ್ರೇಯಸ್ಅದೇ ವಿದ್ಯಾಸಂಸ್ಥೆಯಲ್ಲಿ ಖಾಸಗಿಯಾಗಿ ಪಿಯುಸಿ ಪರೀಕ್ಷೆಗೆಂದು ಕೋಚಿಂಗ್ ಪಡೆಯುತ್ತಿದ್ದರು ಎನ್ನಲಾಗಿದೆ.

ಇವರು ತರಬೇತಿ ಪಡೆಯುತ್ತಿದ್ದ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಸೋಮವಾರ ಶಿವಮೊಗ್ಗದ ಎನ್ಆರ್ ಪುರದಲ್ಲಿ ಮದುವೆ ನಡೆಯಲಿದ್ದು, ಮದುವೆಗೆ ಇವರೂ ಸೇರಿ ಹನ್ನೆರಡು ವಿದ್ಯಾರ್ಥಿಗಳು ಹೊರಟಿದ್ದರು.

ಇದಕ್ಕಾಗಿ ವಾಹನವೊಂದನ್ನು ನಿಗದಿಪಡಿಸಿದ್ದರು. ಹೋಗುವ ಮಾರ್ಗಮಧ್ಯೆ ಈ ಅವಘಡ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two motor bike-borne students were killed after their two-wheeler got involved with an accident near Sunkadakatte in Kadaba village on Sunday October 23.
Please Wait while comments are loading...