ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರು ಚಾಲಕರ ಬೀದಿ ಕಾಳಗ

|
Google Oneindia Kannada News

ಮಂಗಳೂರು, ನವೆಂಬರ್ 08: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಲಾ ಹಾಗೂ ಸ್ಥಳೀಯ ಕಾರು ಚಾಲಕರ ನಡುವೆ ಬೀದಿ ಕಾಳಗ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಕಾರು ಚಾಲಕರ ಮಧ್ಯೆ ಮಾರಾಮಾರಿ ನಡೆದಿದೆ.

ಮಹಿಳೆಯರಿಗೆ ನೆಮ್ಮದಿ ಸುದ್ದಿ: ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ಇಲ್ಲ ಮಹಿಳೆಯರಿಗೆ ನೆಮ್ಮದಿ ಸುದ್ದಿ: ಕ್ಯಾಬ್‌ಗಳಲ್ಲಿ ಚೈಲ್ಡ್ ಲಾಕ್ ಇಲ್ಲ

ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕ್ಯಾಬ್ ಚಾಲಕ ಏರ್ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ತನ್ನ ಕಾರನ್ನು ಪಾರ್ಕ್ ಮಾಡಿದ್ದ. ಇದನ್ನು ಸ್ಥಳೀಯ ಕಾರು ಚಾಲಕರು ಆಕ್ಷೇಪಿಸಿದ್ದು ಕೂಡಲೇ ಕಾರು ತೆರವು ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಓಲಾ ಕಾರು ಚಾಲಕ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿ, ತನ್ನ ಸಹವರ್ತಿಗಳನ್ನು ಅಲ್ಲಿಗೆ ಕರೆಸಿದ್ದಾನೆ.

ದೇಶದಲ್ಲೇ ಮೊದಲು: ಬೆಂಗಳೂರಲ್ಲಿ ಆಪ್ ಆಧಾರಿತ ಶ್ವಾನ ಕ್ಯಾಬ್ದೇಶದಲ್ಲೇ ಮೊದಲು: ಬೆಂಗಳೂರಲ್ಲಿ ಆಪ್ ಆಧಾರಿತ ಶ್ವಾನ ಕ್ಯಾಬ್

Ola cab driver attacked in Mangaluru Air port

ಆ ಬಳಿಕ ಸ್ಥಳೀಯ ಟ್ಯಾಕ್ಸಿ ಚಾಲಕರು ಮತ್ತು ಓಲಾ ಚಾಲಕರ ನಡುವೆ ಬೀದಿ ಕಾಳಗವೇ ನಡೆದಿದೆ. ಏರ್ಪೋರ್ಟ್ ಆವರಣದಲ್ಲಿಯೇ ಪರಸ್ಪರ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಓಲಾ ಕಾರು ಚಾಲಕನೊಬ್ಬನಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪಾನಮತ್ತ ಊಬರ್ ಚಾಲಕ: ಕ್ಯಾಬ್ ಓಡಿಸಿದ ಪ್ರಯಾಣಿಕ ಪಾನಮತ್ತ ಊಬರ್ ಚಾಲಕ: ಕ್ಯಾಬ್ ಓಡಿಸಿದ ಪ್ರಯಾಣಿಕ

Ola cab driver attacked in Mangaluru Air port

ಓಲಾ ಕ್ಯಾಬ್ ಒಂದನ್ನು ಸ್ಥಳೀಯ ಟ್ಯಾಕ್ಸಿ ಚಾಲಕರು ಕಲ್ಲು ತೂರಿ ಜಖಂ ಗೊಳಿಸಿದ್ದಾರೆ. ಏರ್ಪೋರ್ಟ್ ಆವರಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಕಾರು ಚಾಲಕರ ನಡುವೆ ಪೈಪೋಟಿ ಇದ್ದು ಓಲಾ ಕ್ಯಾಬ್ ಸಿಬಂದಿಗೆ ಅವಕಾಶ ನೀಡುತ್ತಿಲ್ಲ. ಓಲಾ ಟ್ಯಾಕ್ಸಿಯಂತಹ ಆನ್ ಲೈನ್ ಕ್ಯಾಬ್ ಗಳು ಕಡಿಮೆ ಬಾಡಿಗೆ ದರದಲ್ಲಿ ಪ್ರಯಾಣಿಕರನ್ನು ಮಂಗಳೂರು ನಗರ ತಲುಪಿಸುವ ಕಾರಣ ಮುಂದಿಟ್ಟು ಈ ಹಿಂದೆಯೂ ಜಟಾಪಟಿ ನಡೆದಿತ್ತು.

ಈ ವಿಚಾರ ಹಲವು ಸಮಯದಿಂದ ಈ ದ್ವೇಷ ಹೊಗೆಯಾಡುತ್ತಿದ್ದು ಈಗ ಬೀದಿ ಕಾಳಗ ನಡೆಯುವ ಮಟ್ಟಿಗೆ ತಲುಪಿದೆ.

English summary
Ola and Uber taxi drivers attacked in Mangaluru international Airport by local taxi drivers. police registered case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X