ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಆರ್ ಪಿಎಲ್ ನ ಪೈಪ್ ಲೈನ್ ನಲ್ಲಿ ತೈಲ ಸೋರಿಕೆ: ಜೋಕಟ್ಟೆ ಪರಿಸರದಲ್ಲಿ ಆತಂಕ

|
Google Oneindia Kannada News

ಮಂಗಳೂರು, ಆಗಸ್ಟ್ 01: ಮಂಗಳೂರು ಹೊರವಲಯದ ಎಂಆರ್ ಪಿಎಲ್ ನಿಂದ ನವ ಮಂಗಳೂರು ಎನ್ ಎಂಪಿಟಿ ಬಂದರಿಗೆ ಕೊಳವೆ ಮೂಲಕ ಸಾಗಿಸಲಾಗುವ ಪೆಟ್ರೋ ಕೆಮಿಕಲ್ ತೈಲ ಸೋರಿಕೆಯಾಗಿದೆ. ಬೈಕಂಪಾಡಿ ಬಳಿಯ ಜೋಕಟ್ಟೆ ಎಂಬಲ್ಲಿ ತೈಲ ಸೋರಿಕೆ ಕಂಡುಬಂದಿದೆ.

ತೈಲ ಸೋರಿಕೆ ಯಾಗುತ್ತಿರುವ ಕುರಿತು ಸ್ಥಳೀಯರು ದೂರು ನೀಡಿದರೂ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸೋರಿಕೆಯಾಗುತ್ತಿರುವ ತೈಲ ಪರಿಸರದ ಅಂತರ್ಜಲ ಸೇರುವುದಲ್ಲದೆ, ಈ ತೈಲದ ಕೊಳವೆ ಫಲ್ಗುಣಿ ನದಿ ದಡದಲ್ಲಿ ಹಾದು ಹೋಗುವುದರಿಂದ ನದಿಗೆ ತೈಲ ಸೇರಿ ಮಲಿನಗೊಳ್ಳುವ ಆತಂಕ ವ್ಯಕ್ತಪಡಿಸಲಾಗಿದೆ.

Oil leakage in pipeline of MRPL near Jokatte village

ಮಂಗಳೂರಿನಲ್ಲಿ ರಸ್ತೆಯಲ್ಲಿ ಹರಿದ ಆಯಿಲ್, ಉರುಳಿ ಬಿದ್ದ ಬೈಕ್ ಸವಾರರುಮಂಗಳೂರಿನಲ್ಲಿ ರಸ್ತೆಯಲ್ಲಿ ಹರಿದ ಆಯಿಲ್, ಉರುಳಿ ಬಿದ್ದ ಬೈಕ್ ಸವಾರರು

ಎಂಆರ್ ಪಿಎಲ್ ನ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪೆಟ್ರೋ ಕೆಮಿಕಲ್ ಸೋರುತ್ತಿದ್ದರೂ, ಸೋರಿಕೆ ತಡೆಯುವ ಕೆಲಸ ನಡೆದಿಲ್ಲ ಎನ್ನಲಾಗುತ್ತಿದೆ. ಎಂಆರ್ ಪಿ ಎಲ್ ಅಧಿಕಾರಿಗಳು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಿದ್ದರೂ, ಪರಿಸರ ಮಾಲಿನ್ಯ ಘಟಕದ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಸೋರಿಕೆ ಪಾಯಿಂಟ್ ಗುರುತಿಸುವ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Oil leakage in pipeline of MRPL near Jokatte village

ಕಳೆದ ಹಲವು ದಿನಗಳಿಂದ ಹೀಗೆ ಸೋರಿಕೆಯಾಗುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

English summary
There is a leakage in the MRPL oil pipeline that is situated between MRPL to NMPT. Residents of Jokatte Village alleged that MRPL officials lest bother about oil leakage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X