• search

ಮಂಗಳೂರಿನಲ್ಲಿ ಬಜೆಟ್ ಹಣ ಬಿಡುಗಡೆಗೆ ಪರ್ಸೆಂಟೇಜ್ ಕೇಳಿದ ವಿಚಾರ ಬಯಲು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರು, ಸೆಪ್ಟೆಂಬರ್.16: ಸರಕಾರಿ ಯೋಜನೆಗಳಿಗೆ ಪರ್ಸೆಂಟೇಜ್ ನೀಡದಿದ್ದರೆ ಕೆಲಸಗಳೇ ಮುಂದೆ ಸಾಗಲ್ಲ ಎನ್ನುವುದು ಜನರಲ್ಲಿರುವ ಸಾಮಾನ್ಯ ಅಭಿಪ್ರಾಯ. ಯೋಜನೆಗಳ ಹಣದಲ್ಲಿ ಇಂತಿಷ್ಟು ಪರ್ಸೆಂಟ್ ಶಾಸಕರಿಗೆ, ಅಧಿಕಾರಿಗಳಿಗೆ ಹೋಗೇ ಹೋಗುತ್ತೆ ಅನ್ನೋದು ಜನರ ಅನಿಸಿಕೆ.

  ಈಗ ಬಜೆಟ್ ಹಣ ಬಿಡುಗಡೆ ಮಾಡೋದಕ್ಕೂ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ಮಂಗಳೂರಿನಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸ್ವತಃ ಶಾಸಕರ ಎದುರಲ್ಲೇ ಈ ವಿಚಾರ ಬಾಯ್ಬಿಟ್ಟಿದ್ದು, ಬಜೆಟ್ ಹಣ ಬಿಡುಗಡೆ ಆಗಬೇಕಿದ್ದರೆ ಹಣಕಾಸು ಇಲಾಖೆಗೆ ಲಂಚ ಕೊಡಬೇಕು ಅನ್ನೋದನ್ನು ಒಪ್ಪಿಕೊಂಡಿದ್ದಾರೆ.

  ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ

  ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಓಗಳಲ್ಲಿ ತಾಪಂ ಇಓ ಸದಾನಂದ, ಈ ಬಗ್ಗೆ ಲಂಚದ ಬೇಡಿಕೆ ಇಟ್ಟಿದ್ದರು. ಆದರೆ, ಪಿಡಿಓಗಳು ಒಟ್ಟು ಸೇರಿ ಕಾರ್ಯ ನಿರ್ವಹಣಾಧಿಕಾರಿ ಕಚೇರಿಗೆ ಆಗಮಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

  Officials demands bribe Taluk Panchayath officer admits in front of MAL

  Links: 'ಅಹ್ಮದ್ ಪಟೇಲ್ ಗೆ 25 ಲಕ್ಷ ಲಂಚ ಸಂದಾಯ', ಇಡಿಗೆ ಸಿಕ್ಕಿದೆ ಸಾಕ್ಷಿ!

  ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಈ ಬಗ್ಗೆ ತಾಲೂಕು ಪಂಚಾಯತ್ ಇಓ ಬಳಿ ಪ್ರಶ್ನಿಸಿದಾಗ, ಸ್ವತಃ ಅಧಿಕಾರಿ ಹಣಕಾಸು ಇಲಾಖೆಗೆ ಸಂದಾಯ ಮಾಡಬೇಕಿರುವುದನ್ನು ಹೇಳಿಕೊಂಡಿದ್ದಾರೆ.

  Officials demands bribe Taluk Panchayath officer admits in front of MAL

  ಲಂಚ ತೆಗೆದುಕೊಂಡವರಿಗಷ್ಟೇ ಅಲ್ಲ, ಕೊಟ್ಟವರಿಗೂ ಕಠಿಣ ಶಿಕ್ಷೆ

  ಅಲ್ಲದೆ, ಶಾಸಕರು ಹೊಸಬರಾಗಿದ್ದರಿಂದ ನಿಮಗೆ ಇದೆಲ್ಲ ಅರ್ಥ ಆಗಲ್ಲ ಅನ್ನುವ ಹಾರಿಕೆಯ ಮಾತನ್ನೂ ಆಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲಿ ನಡೆದ ಮಾತುಕತೆ ಎಲ್ಲವೂ ಮೊಬೈಲ್ ನಲ್ಲಿ ಸೆರೆಯಾಗಿದ್ದು, ರಾಜ್ಯದ ಹಣಕಾಸು ಇಲಾಖೆಯಿಂದಲೇ ಮಾಮೂಲಿ ಕಲೆಕ್ಷನ್ ಮಾಡ್ತಾರೆ ಅನ್ನೋದಕ್ಕೆ ದಾಖಲೆಯಾಗಿ ಪರಿಣಮಿಸಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Mangaluru Taluk Panchayath officier on September 15 admitted in front of Mangaluru south constituency MLA Bharath Shetty that he indeed demanded bribe from PDOs. now this video viral in social media.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more