ರಮಾನಾಥ ರೈ ಗೆಳೆಯರ ಬಳಗ ವಾಟ್ಸಪ್ ಗ್ರೂಪ್‌ನಲ್ಲಿ ನೀಲಿ ಚಿತ್ರ!

Posted By:
Subscribe to Oneindia Kannada

ಮಂಗಳೂರು, ಆ.09 : ಅಶ್ಲೀಲ ಚಿತ್ರ ವೀಕ್ಷಣೆ ವಿಚಾರದಲ್ಲಿ ಬಿಜೆಪಿ ಭಾರೀ ಮುಜುಗರಕ್ಕೆ ಗುರಿಯಾಗಿತ್ತು. ಈಗ ಕಾಂಗ್ರೆಸ್ ಸರದಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೊಬ್ಬರು ಕಾಂಗ್ರೆಸ್ ಮುಖಂಡರುಗಳು ಇರುವ ವಾಟ್ಸಾಪ್ ಗುಂಪಿಗೆ ನೀಲಿ ಚಿತ್ರ ಪೋಸ್ಟ್ ಮಾಡಿ ಮುಜುಗರ ತಂದಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಕಾಂಗ್ರೆಸ್ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ಅವರ ಗೆಳೆಯರ ಬಳಗ ಎನ್ನುವ ವಾಟ್ಸಪ್ ಗ್ರೂಪ್ ನಲ್ಲಿ ನೀಲಿ ಚಿತ್ರ ಹಾಕಿ ವಿವಾದಕ್ಕೆ ಕಾರಣವಾಗಿದ್ದಾರೆ.

Obseen Video posted at Ramanath Rai congress group - Images go viral

ವಾಟ್ಸಾಪ್ ಗ್ರೂಪ್ ನಲ್ಲಿ ಸಚಿವ ರಮಾನಾಥ್ ರೈ ಅವರದೇ ಡಿಪಿ ಇದೆ. ಅಲ್ಲದೆ ಈ ಗ್ರೂಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರು, ಕಾಂಗ್ರೆಸ್ ನ ಮಹಿಳಾ ಕಾರ್ಯಕರ್ತೆಯರು, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಇತರರು ಇದ್ದಾರೆ.

Obseen Video posted at Ramanath Rai congress group - Images go viral

ಈ ಘಟನೆ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಮಟ್ಟದಲ್ಲೂ ಭಾರೀ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಈ ಪೋಸ್ಟ್ ಹಾಕಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಗ್ರೂಪ್ ನಲ್ಲಿ ಚಳಿ ಬಿಡಿಸಿದ್ದಾರೆ. ಈ ಬ್ಲೂ ಫಿಲ್ಮ್ ಪೋಸ್ಟ್ ವಿಚಾರ ಪಕ್ಷದ ಹೈಕಮಾಂಡ್ ಹಂತಕ್ಕೂ ತಲುಪುವ ಸಾಧ್ಯತೆಗಳಿವೆ.

Obseen Video posted at Ramanath Rai congress group - Images go viral

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ, 'ಬೇರೆಯವರ ಬಗ್ಗೆ ಬೊಟ್ಟು ಮಾಡಿ ತೋರಿಸುವ ನಾವು ಕಾಂಗ್ರೆಸ್ಸಿಗರೇ ಈ ರೀತಿ ಪೋಸ್ಟ್ ಗಳನ್ನು ಹಾಕುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ'.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a shocking incident a obscene Video link was posted at Ramanath Rai Geleyara Balaga Whatsapp group by Puttur Block congress president and now Images go viral. It is said that this incident will be brought to the notice of High command.
Please Wait while comments are loading...