ನಾಪತ್ತೆಯಾಗಿದ್ದ ಯುವತಿ, ಆರೋಪಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 21: ಉತ್ತರ ಕನ್ನಡದ ಹಳಿಯಾಳ ಮೂಲದ ಯುವತಿಯ ನಾಪತ್ತೆ ವಿಚಾರದ ಆರೋಪಿ ಸುನೀತಾ ಬಿಚ್ಚಕಲೆ ಹಾಗೂ ಯುವತಿ ಇಬ್ಬರೂ ಹಳಿಯಾಳ ಪೊಲೀಸ್ ಠಾಣೆಗೆ ಶರಣಾಗಿದ್ದರೆ.

ಮಂಗಳೂರಿನ ಉಳ್ಳಾಲದ ಕಂಪನಿಗೆ ಕೆಲಸಕ್ಕೆ ಸೇರಿಸುತ್ತೇನೆಂದು ಯುವತಿಯೋರ್ವಳನ್ನು ಸುನೀತಾ ಬಿಚ್ಚಕಲೆ ಕರೆದುಕೊಂಡು ಬಂದಿದ್ದರು. ನಂತರ ಯುವತಿ ನಾಪತ್ತೆಯಾಗಿದ್ದಳು. ಯುವತಿ ನಾಪತ್ತೆಯಾಗುತ್ತಿದ್ದಂತೆ ಸುನೀತಾ ಬಿಚ್ಚಕಲೆ ತಲೆ ಮರೆಸಿಕೊಂಡಿದ್ದರು. ಇದೀಗ ನಾಪತ್ತೆಯಾಗಿದ್ದ ಯುವತಿಯೊಂದಿಗೆ ಹಳಿಯಾಳ ಪೊಲೀಸ್ ಠಾಣೆಗೆ ಸುನೀತಾ ಬಿಚ್ಚಕಲೆ ಶರಣಾಗಿದ್ದಾಳೆ.[ಮಂಗಳೂರು: ಕೆಲಸಕ್ಕೆಂದು ಬಂದಿದ್ದ ಉತ್ತರ ಕನ್ನಡ ಯುವತಿ ನಾಪತ್ತೆ]

North Karnataka girl goes missing in mangaluru, herself surrenders to Haliyala Police Station

ಸೋಮವಾರದಂದು ಶರಣಾದ ನಾಪತ್ತೆಯಾಗಿದ್ದ ದೋಂಡಿಬಾಯಿ ಹಾಗೂ ಸುನೀತ ಬಿಚ್ಚಕಲೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಸುನೀತಾ, ಮನೆಯವರು ಇಷ್ಟಕ್ಕೆ ವಿರುದ್ಧವಾಗಿ ದೋಂಡಿಬಾಯಿಯನ್ನು ಮದುವೆ ಮಾಡಲು ಹೊರಟಿದ್ದೆ. ಆದುದರಿಂದ ಅವಳನ್ನು ನನ್ನೊಟ್ಟಿಗೆ ಇರಿಸಿದ್ದಾಗಿ, ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ. ಆದರೆ ಈ ಆರೋಪವನ್ನು ಯುವತಿಯ ಪೋಷಕರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸುನೀತಾ ಬಿಚ್ಚಕಲೆ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹಳಿಯಾಳ ಪೊಲೀಸರು ಆಕೆಯನ್ನು ಉಳ್ಳಾಲ ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A girl from Uttara Kannada who had come to work in a fish mill in Ullal, Mangaluru had gone missing and her parents have urged the police department to find her. But on Monday evening the girl herself has surrendered to Haliyala Police station.
Please Wait while comments are loading...