ಮಂಗಳೂರಿನ ಎಂಸಿಎಫ್‌ಗೆ ನೀರು ಪೂರೈಕೆ ಸ್ಥಗಿತ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 06 : ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (ಎಂಸಿಎಫ್)ಗೆ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ. ನೀರಿನ ಕೊರತೆ ಹಿನ್ನಲೆಯಲ್ಲಿ ಎಂಸಿಎಫ್ ಶೇ 35ರಷ್ಟು ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿರುವುದರಿಂದ ಎಂಸಿಎಫ್‌ಗೆ ಮಂಗಳೂರು ಮಹಾನಗರ ಪಾಲಿಕೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. 15 ದಿನಗಳಿಂದ ಎಂಸಿಎಫ್ ಉತ್ಪಾದನೆ ಶೇ 35 ರಷ್ಟು ಕಡಿತಗೊಳಿಸಿದೆ. ಇನ್ನೂ ಮೂರು ದಿನದಲ್ಲಿ ಉತ್ಪಾದನೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿ, ಬಾಗಿಲು ಮುಚ್ಚುಚ ಸಾಧ್ಯತೆ ಇದೆ. [ಮಂಗಳೂರಿನ ಹಾಸ್ಟೆಲ್ ತೊರೆದ ಸಾವಿರಾರು ವಿದ್ಯಾರ್ಥಿಗಳು]

MCF

'ಎಂಸಿಎಫ್ ನೀರು ಪೂರೈಕೆ ಸ್ಥಗಿತಗೊಳಿಸಿದ್ದೇವೆ' ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಜಲಕ್ಷಾಮದ ಪರಿಣಾಮ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಎಲ್ಲ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುಂತೆ ಆದೇಶಿಸಿದ್ದರು. ಅದರಂತೆ ಈ ನಿರ್ಣಯ ಕೈಗೊಳ್ಳಲಾಗಿದೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

10 ಕೋಟಿ ನಷ್ಟ : ರಸಗೊಬ್ಬರ ಕಾರ್ಖಾನೆಯಾಗಿರುವ ಎಂಸಿಎಫ್ ಪ್ರತಿ ದಿನ 1, 200 ಟನ್ ಯೂರಿಯಾ, ಒಂದು ಸಾವಿರ ಟನ್ ಡಿಎಪಿ ಉತ್ಪಾದಿಸುತ್ತದೆ. ನೀರಿಲ್ಲ ಎನ್ನುವ ಕಾರಣಕ್ಕೆ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಬಾಗಿಲು ಮುಚ್ಚಿ, ಪುನಃ ಆರಂಭಿಸುವಷ್ಟರಲ್ಲಿ 10 ಕೋಟಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. [ಬತ್ತಿದ ನೇತ್ರಾವತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ]

ರಾಜ್ಯದ ಎಲ್ಲೆಡೆ ಬರದ ಆಘಾತ ತಲೆದೋರಿರುವ ಬೆನ್ನಲ್ಲೇ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆಯು ಉತ್ಪಾದನೆ ಸ್ಥಗಿತಗೊಳಿಸಿದರೆ ಕೃಷಿ ಅರ್ಥಿಕತೆಗೂ ದೊಡ್ಡ ಹೊಡೆತ ಬೀಳಲಿದೆ ಎಂಬ ಆತಂಕವೂ ಎದುರಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Mangalore City Corporation (MCC) has stopped water supply for Mangalore Chemicals and Fertilizers Limited (MCF) due to water crisis in the city. MCF has also cut off its production up to 35 percent.
Please Wait while comments are loading...