ಕರ್ನಾಟಕ ಬಂದ್‌ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಬೆಂಬಲವಿಲ್ಲ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 08 : ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೆಂಬಲ ಸಿಗುವ ನಿರೀಕ್ಷೆ ಇಲ್ಲ. ಬಂದ್‌ಗೆ ಬೆಂಬಲ ನೀಡದೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದೆ.

ಎತ್ತಿನಹೊಳೆ ಯೋಜನೆ ವಿರುದ್ಧ ನಡೆದ ಬಂದ್‌ಗೆ ಎಲ್ಲಾ ಜಿಲ್ಲೆಗಳಲ್ಲಿ ಬೆಂಬಲ ಸಿಕ್ಕಿಲ್ಲ. ಆದ್ದರಿಂದ, ಕರ್ನಾಟಕ ಬಂದ್‌ ಬಗ್ಗೆ ಜಿಲ್ಲೆಯಲ್ಲಿ ಒಮ್ಮತ ಮೂಡಿಲ್ಲ. ಆದ್ದರಿಂದ, ಜಿಲ್ಲೆಯ ವಿವಿಧ ಸಂಘಟನೆಗಳು ಬಂದ್‌ನಿಂದ ದೂರವಿರಲು ನಿರ್ಧರಿಸಿವೆ.[ಕರ್ನಾಟಕ ಬಂದ್ : ಬಸ್ಸು, ಆಟೋ, ಟ್ಯಾಕ್ಸಿ ಸಂಚಾರವಿಲ್ಲ]

No support for Karnataka bandh call in Dakshina Kannada

ಕರ್ನಾಟಕ ಸರ್ಕಾರ ಎತ್ತಿನಹೊಳೆ ಯೋಜನೆಯಲ್ಲಿ ತೋರಿಸಿರುವ ಎಡಬಿಡಂಗಿ ನೀತಿಯನ್ನು ಖಂಡಿಸಿರುವ ಜಿಲ್ಲೆಯ ಸಂಘಟನೆಗಳು ಹಾಗೂ ಎತ್ತಿನಹೊಳೆ ವಿರೋಧಿ ಹೋರಾಟಗಾರರು ಕಾವೇರಿ ನದಿ ವಿಚಾರದಲ್ಲಿ ಮೂಗು ತೂರಿಸದಿರಲು ತೀರ್ಮಾನಿಸಿದ್ದಾರೆ.[ಕಾವೇರಿಗಾಗಿ ಕಾವೇರಿದ ಕರ್ನಾಟಕ, ಬಂದ್ ದಿನ ಏನೆಲ್ಲ ಬಂದ್ ?]

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಹಿಂದೆಯೂ ಮಹದಾಯಿಗಾಗಿ ಕರ್ನಾಟಕ ಬಂದ್ ನಡೆದಾಗ ದಕ್ಷಿಣ ಕನ್ನಡದಲ್ಲಿ ಬೆಂಬಲ ವ್ಯಕ್ತವಾಗಿರಲಿಲ್ಲ. ಈ ಬಗ್ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
No support for Karnataka bandh call in Dakshina Kannada and Udupi district on September 9, 2016. Kannada okkuta called for bandh over the Cauvery waters issue.
Please Wait while comments are loading...