ತಡೆಯಾಜ್ಞೆ ಇದ್ದರೂ ಎತ್ತಿನಹೊಳೆ ಕಾಮಗಾರಿ ನಿಂತಿಲ್ಲ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 09 : ದಕ್ಷಿಣ ಕನ್ನಡ ಭಾಗದ ಜನರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಚೆನ್ನೈನ ರಾಷ್ಟ್ರೀಯ ಹಸಿರು ಪೀಠದ ತಡೆಯಾಜ್ಞೆ ಪ್ರಕಾರ ಕಾಮಗಾರಿ ನಡೆಸುವಂತಿಲ್ಲ. ಆದರೆ, ಅಣೆಕಟ್ಟು ನಿರ್ಮಾಣ, ಪೈಪ್ ಲೈನ್ ಅಳವಡಿಕೆ ಕಾಮಗಾರಿ ರಾತ್ರಿ ಹಗಲು ನಡೆಯುತ್ತಿದೆ.

ಕೇಂದ್ರ ಪರಿಸರ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ಕಾಮಗಾರಿ ನಡೆಸಬಹುದು ಎಂದು ಶಿಫಾರಸು ಮಾಡಿದೆ. ಆದರೆ, ಕಾಮಗಾರಿ ಮುಂದುವರಿಸುವುದಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ಮುಖ್ಯ ಇಂಜಿನಿಯರ್ ಹಿಂದೆ ಹಸಿರು ಪೀಠಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರ ರದ್ದುಗೊಂಡಿಲ್ಲ. ಆದರೂ ಕಾಮಗಾರಿ ಮಾತ್ರ ನಿಂತಿಲ್ಲ. [ಎತ್ತಿನಹೊಳೆ ಯೋಜನೆಗೆ ಮತ್ತೆ ತಡೆಯಾಜ್ಞೆ]

yettinahole

ಯಾವ ಕಾಮಗಾರಿ ನಡೆಯುತ್ತಿದೆ? : ಸಕಲೇಶಪುರ ಹೆಬ್ಬಸಾಲೆ ನಿವಾಸಿ ಪ್ರಕಾಶ್ ಪಿಂಟೋ ಅವರು ಹೇಳುವ ಪ್ರಕಾರ, 'ನ್ಯಾಯಾಲದ ತಡೆ ಇದ್ದರೂ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಸರ್ಕಾರ ಮುಂದುವರಿಸಿದೆ. ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಪೈಪ್ ಗಳಿಗೆ ಬೇಕಾದ ಶೀಟ್‌ಗಳನ್ನು ಮದ್ದೂರು ತನಕ ರೈಲಿನಲ್ಲಿ ತಂದು ಅಲ್ಲಿಂದ ಲಾರಿಗಳಲ್ಲಿ ಸಕಲೇಶಪುರಕ್ಕೆ ತರಲಾಗುತ್ತಿದೆ'.[ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

'ಶೀಟ್‌ಗಳನ್ನು ಪೈಪ್ ಗಳಿಗಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಪ್ ಗಳು 13 ಅಡಿ ಎತ್ತರವಿದೆ. ಎತ್ತಿನ ಹಳ್ಳದ ಸುತ್ತ ಪೈಪ್ ರಾಶಿ ಹಾಕಲಾಗಿದೆ. ಅಣೆಕಟ್ಟು ಕಾಮಗಾರಿಯು ಭರದಿಂದ ನಡೆಯುತ್ತಿದೆ. ಸ್ಥಳಕ್ಕೆ ಭೇಟಿ ನೀಡಲು ಯಾರನ್ನೂ ಬಿಡುತ್ತಿಲ್ಲ' ಎನ್ನುತ್ತಾರೆ ಪ್ರಕಾಶ್. [ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]

'ಎತ್ತಿನಹೊಳೆ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶೇ.95 ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕಾರಣದಿಂದ ಕೆಲವರು ಯೋಜನೆ ಪರವಾಗಿದ್ದಾರೆ. ಆದರೂ ಯಾವುದೇ ಪಕ್ಷಕ್ಕೆ ಸೇರಿದ ಜನಪ್ರತಿನಿಧಿಗಳು ಜನರ ವಿರೋಧವನ್ನು ಸರ್ಕಾರಕೆ ತಿಳಿಸುತ್ತಿಲ್ಲ. ಯೋಜನೆ ವಿರುದ್ದ ಗಟ್ಟಿ ಧ್ವನಿ ಎತ್ತುತ್ತಿಲ್ಲ' ಎಂದು ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Green Tribunal, Chennai ordered a stay for Yettinahole drinking water project. As per the order all work along the project site, both within and outside the forest area, will be suspended. But Karnataka government continued the construction work.
Please Wait while comments are loading...