ಪತ್ರಿಕೆ ಸೋರಿಕೆ : ಮಂಗಳೂರು ಕಾಲೇಜು ಮೇಲೆ ದಾಳಿ ನೆಡೆದಿಲ್ಲ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 19 :'ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೇಲೆ ಸಿಐಡಿ ದಾಳಿ ನಡೆದಿಲ್ಲ. ಅಧಿಕಾರಿಗಳು ಭೇಟಿ ಕೊಟ್ಟು ಕೆಲವೊಂದು ಮಾಹಿತಿ ಕೇಳಿದ್ದರು. ಸಿಐಡಿ ಕೇಳಿರುವ ಮಾಹಿತಿಯನ್ನು ನೀಡಿ, ತನಿಖೆಗೆ ಸಹಕಾರ ನೀಡಲಾಗಿದೆ ಎಂದು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನರೇಂದ್ರ ಎಲ್ ನಾಯಕ್ ಹೇಳಿದ್ದಾರೆ.

'ಕಳೆದ ಹಲವು ವರ್ಷಗಳಿಂದ ನಮ್ಮ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಪರಿಣಾಮಕಾರಿ ಶಿಕ್ಷಣವನ್ನು ನೀಡುತ್ತಿದೆ. ಯಾವತ್ತೂ ಯಾವುದೇ ರೀತಿಯಲ್ಲೂ ನಾವು ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇವೆ' ಎಂದು ನಾಯಕ್ ತಿಳಿಸಿದ್ದಾರೆ. [ಪತ್ರಿಕೆ ಸೋರಿಕೆ, 11 ಖಾಸಗಿ ಕಾಲೇಜುಗಳ ಮೇಲೆ ಸಿಐಡಿ ದಾಳಿ]

mangaluru

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ. ಸರ್ಕಾರ ಇಡೀ ರಾಜ್ಯದಲ್ಲಿ ನಡೆಸುತ್ತಿರುವ ತನಿಖೆಗೆ ನಾವು ಸಹಕಾರ ಕೊಟ್ಟಿದ್ದೇವೆ. ಸರ್ಕಾರ ತಪ್ಪಿತಸ್ಥರನ್ನು ಕಂಡು ಹಿಡಿದು ಅವರಿಗೆ ಶಿಕ್ಷೆಯನ್ನು ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ನಾಯಕ್ ಹೇಳಿದ್ದಾರೆ. [ಪತ್ರಿಕೆ ಸೋರಿಕೆ : ಪಿಎಚ್ ಡಿ ವಿದ್ಯಾರ್ಥಿಗಳ ಬಂಧನ]

'ಸಿಐಡಿ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಕೇಳಿರುವುದನ್ನು, ದಾಳಿ ಎಂದು ಬಿಂಬಿಸಿ ಕೆಲವೊಂದು ಮಾಧ್ಯಮಗಳು ಹಾಗೂ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜಕ್ಕೆ ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಐಡಿ ತನಿಖೆ ಮುಗಿದ ಬಳಿಕ ಸತ್ಯ ಹೊರಬರಲಿದೆ' ಎಂದು ನರೇಂದ್ರ ಎಲ್ ನಾಯಕ್ ಸ್ಪಷ್ಟಪಡಿಸಿದ್ದಾರೆ. [ಪಿಯುಸಿ ಪತ್ರಿಕೆ ಉತ್ತರ ಬರೆದು ಮಾರುತ್ತಿದ್ದ ಇಬ್ಬರ ಬಂಧನ]

'ಸಂಸ್ಥೆಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಕಳೆದ 29 ವರ್ಷಗಳಿಂದ ಇಲ್ಲಿ ಕಲಿತ ವಿದ್ಯಾರ್ಥಿಗಳು ಸಂಸ್ಥೆಯ ಪರವಾಗಿ ಸಮಾಜಘಾತಕ ಶಕ್ತಿಗಳ ವಿರುದ್ದ ಕಾನೂನು ಹೋರಾಟ ನಡೆಸಲಿದ್ದಾರೆ' ಎಂದು ನಾಯಕ್ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chairman of Expert Educational And Charitable Foundation, Narendra Nayak Mangaluru clarified that the visit of the CID officers was only to collect some information as part of their investigation and he denied the reports of CID raid on college.
Please Wait while comments are loading...