'ಹೇಗೆ ಯಶಸ್ಸು ಗಳಿಸುವುದು' ಮಂಗಳೂರಿನಲ್ಲಿ ಆ.27ರಂದು ತಿಳಿಯಿರಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 08: 'ಸರಳ ಯೋಚನೆಗಳ ಮೂಲಕ ಹೇಗೆ ಯಶಸ್ಸು ಗಳಿಸುವುದು' ಸೇರಿದಂತೆ ಹಲವು ವಿಷಯಗಳ ಬಗ್ಗೆ ಟೆಡ್ ಎಕ್ಸ್ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಆಗಸ್ಟ್ 27 ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ನಗರದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ "ಸರಳ ಯೋಚನೆಗಳು ವ್ಯತ್ಯಾಸವನ್ನು ತರಬಲ್ಲವು" ಎಂಬ ಪರಿಕಲ್ಪನೆಯಡಿ ಈ ಕಾರ್ಯಕ್ರಮ ನಡೆಯಲಿದೆ.

Nitte college to hold one day convention Lecture on Aug 27th

ಈ ಕಾರ್ಯಕ್ರಮದಲ್ಲಿ ವೈವಿಧ್ಯಮಯ ವಿಷಯಗಳ ಬಗ್ಗೆ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಸರಳ ಯೋಚನೆಗಳ ಮೂಲಕ ಹೇಗೆ ಯಶಸ್ಸು ಗಳಿಸುವುದು ಸಾಧ್ಯ ಎನ್ನುವ ಬಗ್ಗೆ ಒಳನೋಟಗಳನ್ನು ನೀಡುವರು.

ಒಟ್ಟು ಹನ್ನೆರಡು ಮಂದಿ ಉಪನ್ಯಾಸಕರು ಇದರಲ್ಲಿ ಭಾಗವಯಿಸಲಿದ್ದಾರೆ. ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಟಿಕೆಟ್ ಗಳನ್ನು www.tedxnitteuniversity.com ಮೂಲಕ ಪಡೆಯಬಹುದು.

ಯಾವೆಲ್ಲ ವಿಷಯದ ಬಗ್ಗೆ ಉಪನ್ಯಾಸ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
* ಡಾ.ಅರವಿಂದ ಭಟೇಜಾ- ನಿರ್ದಿಷ್ಟ ಉದ್ದೇಶಕ್ಕೆ ಮುನ್ನಡೆಯುವುದು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು.
* ದೀಪ್ ಬಜಾಜ್- ಆಕೆ ಏಕೆ ಸ್ವಂತವಾಗಿ ನಿಲ್ಲಲಾರಳು.
* ಅರ್ಚನಾ ಸುರೇಶ್- ಜನರು ಮತ್ತೆ ನಗುವಂತೆ ಮಾಡುವುದು.
* ಡಾ.ವಿಶಾಲ್, ನಾನು ಸರಕಾರಿ ಅಧಿಕಾರಿ, ನಿಮ್ಮ ನೆರವಿಗಿದ್ದೇನೆ.
* ನೇಹಾ ಭಟ್ನಾಗರ್, ಶ್ರುತಿ ಚತುರ್ವೇದಿ, ಪವನ್ ಕುಮಾರ್, ವಿಶಾಲ್ ಬಾತ್ರಾ ಅವರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡುವರು.
*ಖ್ಯಾತ ಮರಳು ಕಲಾವಿದ ನಿತೀಶ್ ಭಾರ್ತಿ, ಮಾನಸಿಕ ತಜ್ಞ ಕಣ್ಣನ್ ಅವರೂ ಭಾಗವಹಿಸಲಿದ್ದು, ಟೋಟೋ ಕ್ಲಬ್ ನಿಂದ ಬ್ಯಾಂಡ್ ಕಾರ್ಯಕ್ರಮವಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nitte college to organize one day convention Lecture by Experts on Medical subject on Aug 27th from 10AM to 5PM. For tickets log on to offical website of Nitte.
Please Wait while comments are loading...