2017 ಗಣರಾಜೋತ್ಸವ ಪರೇಡ್ ನಲ್ಲಿ ಮಂಗ್ಳೂರಿನ ನಿಷೆಲ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು. ಜನವರಿ. 20 : ಮಂಗಳೂರಿನ ಸೈಂಟ್ ಅಲೋಶಿಯಸ್ ಶಾಲೆಯ ಎನ್ ಸಿ ಸಿ ವಿದ್ಯಾರ್ಥಿನಿ ನಿಷೆಲ್ ಅಲ್ಮೇಡಾ ಈ ಬಾರಿಯ ಜನವರಿ 26ರಂದು ದೆಹಲಿಯಲ್ಲಿ ನೆಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ.

ಮಂಗಳೂರಿನ ಕುಲಶೇಕರ್ ನಗರದ ನಿವಾಸಿ ನವೀನ್ ಡಿ ಅಲ್ಮೇಡಾ ಮತ್ತು ತಾಯಿ ಕ್ರಿಸ್ ಎವರ್ಟ್ ದಂಪತಿಯ ಪುತ್ರಿ ನಿಷೆಲ್ ಅಲ್ಮೇಡಾ ಸೇಂಟ್ ಅಲೋಶಿಯಸ್ ಹೈಸ್ಕೂಲ್ ನ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ಈಕೆ ರಾಷ್ಟ್ರೀಯ ಕ್ಯಾಡೆಟ್ ಕೋರ್ ನ (ಎನ್ ಸಿಸಿ) ವಾಯು ದಳದವರಾಗಿದ್ದು, ಈ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆಯುವ ಬೃಹತ್ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾಳೆ.

Nishel from mangaluru to march at Republic Day parade in Delhi on January 26

ನಿಷೆಲ್ ಅವರನ್ನು ಪ್ರತಿಭೆಯ ಬಹುಮುಖ ಎಂದೇ ಕರೆಯಬಹುದು. ಹಾಡುಗಾರಿಕೆ, ನಾಟಕಗಳು, ಕವನ ರಚನೆ, ಪ್ರಬಂಧ ಬರೆಯುವುದು ಹಾಗೂ ಭಾಷಣ ಮಾಡುವುದರಲ್ಲಿ ಎತ್ತಿದ ಕೈ.

ಪಥಸಂಚಲನಕ್ಕೆ ಆಯ್ಕೆಯಾಗಲು ಸಹಕಾರಿಯಾದ ಶಾಲೆಯ ಶಿಕ್ಷಕರಿಗೆ ಮತ್ತು ವಿಶೇಷವಾಗಿ ಎನ್ ಸಿಸಿ ಮಾರ್ಗದರ್ಶಕ ಸುನಿಲ್ ಲೋಬೊ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾಳೆ.

ಮತ್ತು ತಂದೆ ನವೀನ್ ಡಿ ಅಲ್ಮೇಡಾ ಮತ್ತು ತಾಯಿ ಕ್ರಿಸ್ ಎವರ್ಟ್ ಪ್ರತಿಯೊಂದು ಹಂತದಲ್ಲೂ ಸಹಕಾರ ನೀಡಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ಪ್ರತಿಯೊಂದು ಯಶಸ್ಸಿನ ಕಥೆಯ ಹಿಂದೆ ಶ್ರಮ, ಉತ್ಸಾಹ, ಏಕಾಗ್ರತೆ ಮತ್ತು ಸ್ಥಿರ ಗುರಿ ಇರುವುದರಿಂದಲೇ ಯಶಸ್ಸಿನ ಪಥ ಮುಟ್ಟಲು ಸಾಧ್ಯ.

ನಿಷೆಲ್ ಆಳ್ವಾಸ್ ಮೂಡುಬಿದಿರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಸಿದ ಎನ್ ಸಿಸಿ ಪ್ರಾಥಮಿಕ ಶಿಬಿರಗಳಲ್ಲಿ ಅರ್ಹತಾ ಸುತ್ತಿನಲ್ಲಿ ತನ್ನ ಪ್ರತಿಭೆಯನ್ನು ತೋರಿಸಿ ಈ ಸ್ಥಾನಕ್ಕೆ ಬಂದಿದ್ದಾಳೆ.

ಇದ್ದಲ್ಲದೆ ನಿಷೆಲ್ ಎಲ್ಲಾ ಶಿಬಿರಗಳಲ್ಲಿ ಅತ್ಯುತ್ತಮ ಕ್ಯಾಡೆಟ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nishel from Mangaluru to march at Republic Day parade in Delhi on January 26. Nishel Almeida, a class 9 student of St Aloysius High School, Kodialbail and a young talent in the National Cadet Corps (NCC) air wing has been selected for this year's Republic Day parade as an all-rounder cadet.
Please Wait while comments are loading...