ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದಲ್ಲಿ ನಿಫಾ ವೈರಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

|
Google Oneindia Kannada News

ಮಂಗಳೂರು ಮೇ 21: ಕಳೆದ ಕೆಲವು ದಿನಗಳಿಂದ ಕೇರಳದಾದ್ಯಂತ ಭಾರೀ ಆತಂಕ ಮೂಡಿಸಿರುವ ನಿಫಾ ವೈರಸ್ ಸೋಂಕಿನ ಕುರಿತು ಕರ್ನಾಟಕದಲ್ಲಿಯೂ ಭಯ ಕಾಡಲಾರಂಭಿಸಿದೆ. ಕೇರಳದಲ್ಲಿ ಭಾರೀ ವೇಗವಾಗಿ ಈ ಸೋಂಕು ಹರಡುತ್ತಿದ್ದು, ಈಗಾಗಲೇ 11 ಕ್ಕೂ ಹೆಚ್ಚು ಜನರು ನಿಫಾ ವೈರಸ್ ಗೆ ಬಲಿಯಾಗಿದ್ದಾರೆ.

ಕೋಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಕಾಣಿಸಿಕೊಂಡ ವಿರಳ ಹಾಗೂ ಮಾರಣಾಂತಿಕ ಈ ನಿಫಾ ವೈರಸ್ ಕುರಿತು ದೇಶದಾದ್ಯಂತ ಚರ್ಚೆ ಆರಂಭವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳು ಅರಂಭವಾಗಿದೆ.

ವಿಪರೀತ ಜ್ವರ: ನಿಪಾಹ್‌ ವೈರಸ್‌ಗೆ ಕೇರಳದಲ್ಲಿ 9 ಮಂದಿ ಬಲಿವಿಪರೀತ ಜ್ವರ: ನಿಪಾಹ್‌ ವೈರಸ್‌ಗೆ ಕೇರಳದಲ್ಲಿ 9 ಮಂದಿ ಬಲಿ

ಈ ಮಾರಣಾಂತಿಕ ನಿಫಾ ವೈರಸ್ ಕುರಿತು ರಾಜ್ಯದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಭೇಟಿ ನೀಡುವವರ ಕುರಿತು ನಿಗಾ ವಹಿಸಲಾಗಿದ್ದು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಜಾರಿ ಮಾಡಿದೆ.

Nipah virus threat, High alert in Dakshina Kannada district

ಕೇರಳ ಗಡಿ ಭಾಗವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಅಸ್ಪತ್ರೆಗಳಿಂದ ಆರೋಗ್ಯ ಇಲಾಖೆ ವರದಿ ತರಿಸಿಕೊಂಡಿದ್ದು ನಿಫಾ ವೇರಸ್ ವೈರಸ್ ತಗುಲಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ಜಿಲ್ಲೆಯ ಎಲ್ಲಾ ಖಾಸಗಿ ಹಾಗು ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಬಗ್ಗೆ ಗಮನ ಇರಿಸುವಂತೆ ಸೂಚನೆ ನೀಡಲಾಗಿದೆ.

ಅದರಲ್ಲೂ ಕೇರಳದ ರೋಗಿಗಳ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ನಿಫಾ ಸೊಂಕು ತಗುಲಿದ ರೋಗಿಗಳ ಬಗ್ಗೆ ಅನುಮಾನ ಬಂದಲ್ಲಿ ತಕ್ಷಣ ಇಲಾಖೆಗೆ ಸೂಚಿಸುವಂತೆ ಹಾಗೂ ರೋಗಿಗಳ ರಕ್ತವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸುವಂತೆ ನಿರ್ದೇಶನ ನೀಡಲಾಗಿದೆ.

ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?

ಕೇರಳದಲ್ಲಿ ನಿಫಾ ವೈರಸ್ ಗೆ ನರ್ಸ್ ಒಬ್ಬರು ತುತ್ತಾದ ಕಾರಣ ವೈದ್ಯಕೀಯ ಸಿಬ್ಬಂದಿಗಳು ಕೂಡ ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ. ಜ್ವರ, ವಾಂತಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಈ ವೈರಸ್ ನ ಲಕ್ಷಣವಾಗಿದ್ದು ಈ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ.

ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ನಿಫಾ ವೈರಸ್ ಅತ್ಯಧಿಕ ವೇಗವಾಗಿ ಹರಡುವ ರೋಗಾಣುವಾಗಿದ್ದು. ಈ ನಿಫಾ ವೈರಸ್ ಬಾವಲಿ, ಹಂದಿ ಹಾಗೂ ಇನ್ನಿತರ ಪ್ರಾಣಿಗಳಿಂದ ಹರಡುತ್ತದೆ ಎಂದು ಹೇಳಲಾಗಿದೆ.

English summary
Nearly 5 people died in Kerala coastal city Kozikode. It is reported that these deaths due to the dangerous Nipah virus. Because of Nipah virus threat high alert announced in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X