ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಎನ್ ಐಎ ಕಚೇರಿ ತೆರೆಯಲು ಟ್ವಿಟ್ಟಿಗರ ಆಗ್ರಹ

|
Google Oneindia Kannada News

ಮಂಗಳೂರು, ಜುಲೈ 14: ಮಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಕೋಮು ಗಲಭೆ, ಹಿಂಸಾಚಾರಗಳನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಕಚೇರಿ ತೆರೆಯಬೇಕೆಂದು ಟ್ವಿಟ್ಟಿಗರು ಆಗ್ರಹಿಸುತ್ತಿದ್ದಾರೆ.

#NIAOfficeInMangaluru ಎಂಬ ಹ್ಯಾಶ್ ಟ್ಯಾಗಿನಲ್ಲಿ ಹಲವರು ಟ್ವೀಟ್ ಮಾಡುತ್ತಿದ್ದು, ಮಂಗಳೂರಿನಲ್ಲಿ ಕೋಮು ಗಲಭೆ, ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು, ದಕ್ಷಿಣ ಭಾರತವೂ ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಂತೆ ಟೆರರ್ ಹಬ್ ಆಗುವುದನ್ನು ನಾವು ಸಹಿಸುವುದಿಲ್ಲ.

ಆರೆಸ್ಸೆಸ್ ಕಾರ್ಯಕರ್ತನ ಸಾವು: ಬಿ ಸಿ ರೋಡಿನಲ್ಲಿ ಸ್ಮಶಾನ ಮೌನಆರೆಸ್ಸೆಸ್ ಕಾರ್ಯಕರ್ತನ ಸಾವು: ಬಿ ಸಿ ರೋಡಿನಲ್ಲಿ ಸ್ಮಶಾನ ಮೌನ

ಅದಕ್ಕೆಂದೇ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿ ತೆರೆಯಬೇಕೆಂದು ಬಿಜೆಪಿಯೂ ಒತ್ತಾಯಿಸಿದೆ. ಈ ಕುರಿತು ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಪತ್ರ ಸಹ ಬರೆದಿದ್ದಾರೆ. ದುಷ್ಕರ್ಮಿಗಳಿಂದ ಹತರಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ನಂತರ ಎನ್ ಐಎ ಕಚೇರಿಯ ಬೇಡಿಕೆ ಮತ್ತಷ್ಟು ಹೆಚ್ಚಿದೆ.

ಮಂಗಳೂರು: ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಸಾವುಮಂಗಳೂರು: ಹಲ್ಲೆಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಸಾವು

ಅದೇನೇ ಇರಲಿ, ಟ್ವಿಟ್ಟರಿನಲ್ಲಂತೂ ಎನ್ ಐಎ ಕಚೇರಿಗೆ ಬೇಡಿಕೆಯಿಟ್ಟು ಹಲವರು ಟ್ವೀಟ್ ಮಾಡುತ್ತಿದ್ದಾರೆ.

ಮತಬ್ಯಾಂಕ್ ಗೆ ಇತಿಶ್ರೀ ಹಾಡಲು

ತನ್ನ ಮತಬ್ಯಾಂಕ್ ಗಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಅರ ಮುಸ್ಲಿಮರನ್ನು ಓಲೈಸುತ್ತಿದೆ. ಇಂಥವಕ್ಕೆಲ್ಲ ಇತಿಶ್ರೀ ಹಾಡಲು ನಮಗೆ ಮಂಗಳೂರಿನಲ್ಲೊಂದು ಎನ್ ಐಎ ಕಚೇರಿ ಬೇಕಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಮಂಗಳೂರಿಗೆ ಎನ್ ಐಎ ಬೇಕೇ ಬೇಕು

ಕೇರಳದ ನಂತರ ಐಸಿಸ್ ಉಗ್ರರಿಗೆ ಅತೀ ಹೆಚ್ಚು ಕಚ್ಚಾ ವಸ್ತು ಪೂರೈಕೆಯಾಗುವುದು ಮಂಗಳೂರಿನಿಂದ ಎಂಬುದನ್ನು ನೀವು ನಂಬಲೇಬೇಕು. ಇದರ ನಿಯಂತ್ರಣಕ್ಕೆ ಮಂಗಳೂರಿನಲ್ಲಿ ಎನ್ಐಎ ಕಚೇರಿ ಬೇಕೇ ಬೇಕು ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಟ್ವೀಟ್ ಮಾಡಿದ್ದಾರೆ.

ಶಾಖೆ ಮುಗಿಸಿ ಬರುವಾಗ ಭಯವಾಗುತ್ತೆ!

ಶಾಖೆ ಮುಗಿಸಿ, ತಿರುಗಿ ಮನೆಗೆ ಹೋಗುವುದಕ್ಕೆ ನನಗೆ ಭಯವಾಗುತ್ತದೆ. ದೇಶಕ್ಕಾಗಿ ಕೆಲಸ ಮಾಡುವ ಒಬ್ಬ ಆರೆಸ್ಸೆಸ್ಸ ಸ್ವಯಂಸೇವಕ ಇಲ್ಲಿ ಸುರಕ್ಷಿತವಾಗಿಲ್ಲ, ಮಂಗಳೂರಿನಲ್ಲಿ ಎನ್ ಐಎ ಬೇಕು ಎಂದು ಗಿರೀಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಭಯೋತ್ಪಾದಕರ ನೆಲೆಯಾಗುವುದು ಬೇಡ

ದಕ್ಷಿಣ ಭಾರತ, ಕಾಶ್ಮೀರ ಮತ್ತು ಪಶ್ಚಿಮ ಬಂಗಾಳಂತೆ ಭಯೋತ್ಪಾದಕರ ನೆಲೆಯಾಗುವುದನ್ನು ತಡೆಯಬೇಕೆಂದರೆ ಮಂಗಳೂರಿಗೆ ಎನ್ ಐಎ ಕಚೇರಿ ಬೇಕುಜ ಎಂದು ಸನ್ ಶೈನ್ ಗರ್ಲ್ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

English summary
Many people are demanding an NIA (National Investigation Agency) office in Mangaluru. They are starting an online campaign in twitter to grab central government's attention regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X