ಅಶ್ಲೀಲ ನೃತ್ಯ ನಡೆಸುವಂತಿಲ್ಲ, ಅಸಭ್ಯವಾಗಿ ವರ್ತಿಸುವಂತಿಲ್ಲ!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 30 : ಹೊಸ ವರ್ಷಾಚರಣೆಯನ್ನು ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳು ಡಿಸೆಂಬರ್ 31ರಂದು ಮಧ್ಯರಾತ್ರಿ 1 ಗಂಟೆಯವರೆಗೆ ಒಳಾವರಣದಲ್ಲಿ ಮಾತ್ರ ಕಾರ್ಯಕ್ರಮಗಳನ್ನು ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ನಾಗರಿಕರ ಹಿತದೃಷ್ಟಿಯಿಂದ ಮತ್ತು ಯಾವುದೇ ಅವಘಡಗಳು ಸಂಭವಿಸದಂತೆ ಹೊಸ ವರ್ಷದಂದು ಮುನ್ನಚ್ಚರಿಕೆಯಾಗಿ ಕೆಲವೊಂದು ಸೂಚನೆಗಳನ್ನು ಪೊಲೀಸ್ ಆಯುಕ್ತರು ನೀಡಿದ್ದಾರೆ. ಅವು ಕೆಳಗಿನಂತಿವೆ. [ಸಂಭ್ರಮಕ್ಕೆ ತಡೆಯಿಲ್ಲ, ನಿಯಮ ಉಲ್ಲಂಘಿಸಿದರೆ ಬಿಡಲ್ಲ!]

New Year celebration : Strict rules by Mangaluru Police

* ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಹೊಸ ವರ್ಷದ ಮಧ್ಯರಾತ್ರಿ 12 ಗಂಟೆಗೆ ಆರಂಭವಾದ ಬಳಿಕ 1 ಗಂಟೆಯೊಳಗೆ ಮುಕ್ತಾಯವಾಗಬೇಕು.

* ಹೊಸ ವರ್ಷಾಚರಣೆ ನೆಪದಲ್ಲಿ ಸಮುದ್ರ ಕಿನಾರೆ, ಬಸ್ಸು, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡುವಂತಿಲ್ಲ.

* ಯಾವುದೇ ರೀತಿಯ ಅಸಭ್ಯ ವರ್ತನೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

* ಹೋಟೆಲ್, ರೆಸ್ಟೋರೆಂಟ್, ಸಂಸ್ಥೆಗಳ ಮಾಲೀಕರು ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಿಸಲು ಪೂರ್ವಾನುಮತಿ ಪಡೆಯಬೇಕು. [ನಿಮ್ಮನೆ ಹುಡುಗಿಯ ಹ್ಯಾಪಿ ನ್ಯೂ ಇಯರ್, ಚೀರ್ಸ್!]

New Year celebration : Strict rules by Mangaluru Police

* ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗುವ ಬಾಕ್ಸ್ ಮಾದರಿ ಧ್ವನಿ ವರ್ಧಕಕ್ಕೆ ಮಾತ್ರ ಅವಕಾಶವಿದೆ.

* ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ ಅಥವಾ ಅರೆಬೆತ್ತಲೆ ನೃತ್ಯ, ಜೂಜಾಟ ನಡೆಸುವಂತಿಲ್ಲ.

* ಶುಭ ಕೋರುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿ ಮಹಿಳೆಯರಿಗೆ ತೊಂದರೆ ಕೂಡುವಂತಿಲ್ಲ.

* 31ರ ಮಧ್ಯರಾತ್ರಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾ ವಹಿಸಲು ಸಂಚಾರ ಪೊಲೀಸರು ತಜ್ಞರನ್ನೊಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ.

* ವೀಲಿಂಗ್, ಡ್ರ್ಯಾಗ್ ರೇಸ್, ಅತಿವೇಗದ ಚಾಲನೆ, ಕರ್ಕಶ ಹಾರ್ನ್ ಮಾಡುವುದು ಗೊತ್ತಾದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. [ಹೊಸವರ್ಷಕ್ಕೆ ಒಂದಷ್ಟು ತಮಾಷೆಯ ಸಂಕಲ್ಪಗಳು!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru city police commissioner Chandrashaker has issued certain guidelines to be followed by citizen during new year celebrations in the city. Strict action shall be taken against those who violate the rules.
Please Wait while comments are loading...