ಕರಾವಳಿ ನೀರಿನ ಮೇಲೆ ರಾಜ್ಯ ಸರ್ಕಾರದ ಕಣ್ಣು..!

By: ಶಂಶೀರ್ ಬುಡೋಳಿ, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್ 18 : ಈಗಾಗಲೇ ನೇತ್ರಾವತಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆ ಭಾರೀ ವಿವಾದ ಸೃಷ್ಟಿಸಿರುವುದು ಎಲ್ಲರಿಗೆ ಗೊತ್ತು. ಹೀಗಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ತಂತ್ರ ರೂಪಿಸಿದೆ.ಇದೊಂದು ತರಹ ಸದ್ಯದ ನೀರಿನ ಬವಣೆಯನ್ನ ನೀಗಿಸಲು ರಾಜ್ಯ ಸರ್ಕಾರ ಮಾಡುತ್ತಿರುವ ಪ್ರಯತ್ನ.

ಹೌದು. ಈ ಎರಡು ಯೋಜನೆಗಳನ್ನ ಕೈ ಬಿಟ್ಟು ಅಥವಾ ಸದ್ಯಕ್ಕೆ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಮತ್ತೊಂದು ಯೋಜನೆಯತ್ತ ಮುಖ ಮಾಡಿರುವ ಹಾಗೆ ಕಾಣುತ್ತಿದೆ. ಅರಬ್ಬೀಸಮುದ್ರ ಸೇರುವ ನೇತ್ರಾವತಿ ನದಿ ನೀರನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ದಕ್ಷಿಣ ಕೊರಿಯಾ, ನೈಜೀರಿಯಾ, ಸಿಂಗಾಪುರದಲ್ಲಿ ಈಗಾಗಲೇ ಅಳವಡಿಸಿ ಯಶಸ್ವಿಯಾಗಿರುವ ಯೋಜನೆಯ ಪ್ರತೀಕದಂತಿದೆ.[ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಆ.18ರಂದು ಸಮುದ್ರ ಪೂಜೆ]

netravati

ಪಶ್ಚಿಮ ಘಟ್ಟದಲ್ಲಿರುವ 13 ನದಿಗಳಿಂದ ಈ ವರ್ಷ 2,200 ಟಿಎಂಸಿ ನೀರು ಸಮುದ್ರ ಸೇರಿದೆ ಎಂಬ ಮಾಹಿತಿ ಇದೆ. ಇದರಲ್ಲಿ ಅರ್ಧದಷ್ಟು ನೀರನ್ನು ಬಳಸಿಕೊಂಡರೆ ರಾಜ್ಯದ ಜಲದಾಹವೇ ತೀರುತ್ತದೆ. ಹೀಗಾಗಿ ಒಂದು ಹೊಸ ಯೋಜನೆ ರೆಡಿಯಾಗಿದೆ. ಅಂದಹಾಗೇ ಈ ಯೋಜನೆಯನ್ನ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಸೀತಾರಾಮ್ ಸಿದ್ಧಪಡಿಸಿದ್ದಾರೆ.

ಯೋಜನೆ ಏನು..?
ನೇತ್ರಾವತಿ ನದಿ ನೀರು ಸಮುದ್ರ ಸೇರುವ ಜಾಗದಲ್ಲಿ ಡ್ಯಾಂ ಕಟ್ಟುವ ಮೂಲಕ ಸಮುದ್ರ ಸೇರುವ 100 ಟಿಎಂಸಿ ನೀರನ್ನ ಸ್ಟೋರೇಜ್ ಮಾಡಿ ಬಳಸಬಹುದು ಎನ್ನುವುದು ಈ ಯೋಜನೆಯ ಲೆಕ್ಕಾಚಾರ. ನೇತ್ರಾವತಿ ನದಿ ನೀರು ಸಮುದ್ರ ಸೇರುವ ಅಂಚಲ್ಲಿ ಡ್ಯಾಂ ನಿರ್ಮಾಣ ಮಾಡುವುದು.ಪ್ರತಿವರ್ಷ ಪ್ರವಾಹದ ನೀರು ಶೇಖರಣೆಯಾದರೂ 100 ಟಿಎಂಸಿ ನೀರು ಲಭ್ಯವಾಗುತ್ತದೆ. 2,200 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 13 ಮೀಟರ್ ಎತ್ತರ, 7 ಕಿ.ಮೀ. ತಡೆಗೋಡೆ ನಿರ್ಮಾಣ ಮಾಡುವುದು. ತಡೆಗೋಡೆ ಮೂಲಕ ನದಿಯ ಸಿಹಿ ನೀರು ಹಾಗೂ ಸಮುದ್ರದ ಉಪ್ಪು ನೀರನ್ನ ಬೇರ್ಪಡಿಸಬೇಕು. ಮಳೆಗಾಲದಲ್ಲಿ ನದಿಯ ಪ್ರವಾಹದ ನೀರನ್ನು ಸಂಗ್ರಹ ಮಾಡಬಹುದು. ಈ ರೀತಿಯ ಡ್ಯಾಂನಿಂದ ಅರಣ್ಯ, ಹಳ್ಳಿಗಳು ಮುಳುಗಡೆಯಾಗುವುದಿಲ್ಲ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

ಲಾಭ ಯಾರಿಗೆ..?
ಪಂಪಿಂಗ್ ಮೂಲಕ ಹಾಸನ, ಬೆಂಗಳೂರು, ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸಬಹುದು. ಪೈಪ್ ಅಳವಡಿಕೆಗೆ ಹೆಚ್ಚೆಂದರೂ 6 ಸಾವಿರ ಕೋಟಿ ರೂ. ಹಣದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬಹುದು. ನರ್ಮದಾ ನದಿಗೆ ಈ ಮಾದರಿಯ ಡ್ಯಾಂ ನಿರ್ಮಾಣಕ್ಕೆ ಗುಜರಾತ್ ಚಿಂತನೆ ನಡೆಸಿದೆ. ಆದರೆ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ರಾಜ್ಯ ಸರ್ಕಾರ ಈ ನೂತನ ಯೋಜನೆ ಬಗ್ಗೆ ಕರಾವಳಿಗರಲ್ಲಿ ಜಾಗೃತಿ ಮೂಡಿಸಿ ಅನುಷ್ಟಾನಗೊಳಿಸುತ್ತಾ..? ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
after yettinahole, netravati project another water project estimated by state govt..?
Please Wait while comments are loading...