ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವ ಮಂಗಳೂರು ಬಂದರಿನಲ್ಲಿ ಕಾರು ಸಾಗಾಟ ಸೇವೆ ಆರಂಭ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ .15 : ಪಣಂಬೂರಿನ ನವ ಮಂಗಳೂರು ಬಂದರಿನಲ್ಲಿ ಕಾರು ಸಾಗಾಟ ಸೇವೆಯನ್ನು ನಿರ್ವಹಿಸುವ ನೂತನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.

ಕೇಂದ್ರ ಸರ್ಕಾರ ಕರಾವಳಿಯ ನೌಕಾ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ನವ ಮಂಗಳೂರು ಬಂದರು ಈ ವಿನೂತನ ಸೇವೆಯನ್ನು ಮಂಗಳೂರು ಮತ್ತು ಗುಜರಾತ್ ನಡುವೆ ಪರಿಚಯಿಸಿದೆ.

ಈ ಹಡಗು ಗುಜರಾತ್, ಮಂಗಳೂರು ಮತ್ತು ಕೊಚ್ಚಿ ನಡುವೆ ಸಂಚರಿಸಲಿದೆ. ಶುಕ್ರವಾರ ನವ ಮಂಗಳೂರಿಗೆ ಬಂದ ಹಡಗು ಟಾಟಾ ಕಂಪೆನಿಯ ಕಾರುಗಳನ್ನು ಇಳಿಸಿ ಬಳಿಕ ಕೊಚ್ಚಿ ನತ್ತ ಪ್ರಯಾಣ ಬೆಳೆಸಿತು. [ಮಂಗಳೂರು ಬಂದರಿಗೆ ಬಂದ ಇಬ್ಬರು ಹೊಸ ಅತಿಥಿಗಳು]

New Mangalore Port introduces car carrier service

ಈ ಕಾರುಗಳು ಮಂಗಳೂರು ಮತ್ತು ಉಡುಪಿಯ ಟಾಟಾ ಡೀಲರ್ಸ್ ಗಳ ಮಳಿಗೆಗಳಿಗೆ ಪೂರೈಕೆಯಾಗಲಿವೆ. ಕಾರುಗಳು ಲೋಡ್ ಆಗಿರುವ ಟ್ರಕ್ ಗಳ ಸಮೇತ ಹಡಗಿನ ಒಳಗಡೆ ಹೋಗುವ ವ್ಯವಸ್ಥೆ ಇದರಲ್ಲಿದೆ.

ಈ ಹೊಸ ಸೇವೆಯಿಂದ ಮಂಗಳೂರು- ಗುಜರಾತ್ ನಡುವೆ ಕಾರುಗಳನ್ನು ಸಾಗಿಸುವ ಬೃಹತ್ ಟ್ರಕ್ ಗಳನ್ನು ಬಳಕೆ ಮಾಡುವ ಪ್ರಮೇಯ ತಪ್ಪಲಿದೆ. ಅಲ್ಲದೆ ಇಂಧನ ವೆಚ್ಚ, ಟೋಲ್ ವೆಚ್ಚ ಹಾಗು ಇತರ ಸಾಗಾಟ ವೆಚ್ಚವನ್ನು ಉಳಿಸಲಿದೆ

ಹಾಗೂ ಅಪಾಯ ಕಾರಿಯಾಗಿ ಟ್ರಕ್ ಗಳಲ್ಲಿ ಕಾರುಗಳನ್ನು ಹೇರಿಕೊಂಡು ಅತೀ ದೂರ ಕ್ರಮಿಸುವ ವ್ಯವಸ್ಥೆಗೂ ಕಡಿವಾಣ ಹಾಕಲಿದೆ.

English summary
In line with Government of India’s policy of implementing vision for coastal shipping, tourism and regional development, the New Mangalore Port Trust (NMPT) has introduced car carrier service between Gujarat and Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X