ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 27 : ಕರಾವಳಿ ಮೇಲೆ ಹದ್ದಿನ ಕಣ್ಣಿಡುವ ಐಸಿಜಿಎಸ್ ಶೂರ್ ನೌಕೆ ಮಂಗಳೂರಿನ ನವಮಂಗಳೂರು ಬಂದರಿಗೆ ಬಂದಿದೆ. ಗೋವಾದ ಶಿಪ್‌ಯಾರ್ಡ್‌‌ನಲ್ಲಿ ಈ ನೌಕೆ ನಿರ್ಮಾಣವಾಗಿದೆ ಎಂಬುದು ವಿಶೇಷ.

26/11 ಉಗ್ರರ ದಾಳಿಯ ಬಳಿಕ ಸಮುದ್ರ ಮಾರ್ಗದ ಮೇಲೆ ಹದ್ದಿನ ಕಣ್ಣಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕರಾವಳಿಯ ಬಲ ಹೆಚ್ಚಿಸಲು ತುರ್ತು ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ ಐಸಿಜಿಎಸ್ ಶೂರ್ ನೌಕೆ ನಿರ್ಮಾಣ ಮಾಡಲಾಗಿದೆ. [ವಿಕ್ರಮಾದಿತ್ಯ ಕಾರವಾರ ನೌಕಾನೆಲೆಗೆ]

karavali

ಏ. 11ರಂದು ಕೇಂದ್ರ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ಅವರು ಐಸಿಜಿಎಸ್ ಶೂರ್ ನೌಕೆಯನ್ನು ಗೋವಾದಲ್ಲಿ ಲೋಕಾರ್ಪಣೆ ಮಾಡಿದ್ದರು. 105 ಮೀ. ಉದ್ದವಿರುವ ಮಧ್ಯಮ ಗಾತ್ರದ ನೌಕೆ, ಒಂದು ಹೆಲಿಕಾಪ್ಟರ್ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿದೆ. [ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ದೇಶಪಾಂಡೆ]

ಆತ್ಯಾಧುನಿಕ ಸಂಪರ್ಕ ಸೌಲಭ್ಯ, ಕಣ್ಗಾವಲು ವ್ಯವಸ್ಥೆಯ ಪರಿಕರ, ಸಮುದ್ರ ಮಾಲಿನ್ಯ ತಪಾಸಣೆ, ಮೀನುಗಾರರ ರಕ್ಷಣೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಇದು ಹೊಂದಿದೆ. ದಿನದ 24 ಗಂಟೆಯೂ ಅಪರಿಚಿತ, ಅನುಮಾನಾಸ್ಪದ ಹಡಗುಗಳ ಮೇಲೆ ಕಣ್ಗಾವಲು ಇಡವ ವ್ಯವಸ್ಥೆಯನ್ನು ನೌಕೆ ಹೊಂದಿದೆ. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]

mangaluru

ಐಸಿಜಿಎಸ್ ಶೂರ್ ನೌಕೆ ಮಂಗಳವಾರ ಮಂಗಳೂರಿಗೆ ಆಗಮಿಸಿದೆ. ಪಣಂಬೂರನ್ನು ಜಿಲ್ಲಾ ಪ್ರಧಾನ ಕಚೇರಿಯನ್ನಾಗಿ ಮಾಡಿಕೊಂಡು ನೌಕೆ ಕಾರ್ಯನಿರ್ವಹಣೆ ಮಾಡಲಿದೆ. 14 ಅಧಿಕಾರಿಗಳು, 98 ಸಿಬ್ಬಂದಿ ಹೊಂದಿರುವ ನೌಕೆ 2,350 ಟನ್ ತೂಕ ಹಾಗೂ 105 ಮೀಟರ್ ಉದ್ದವಿದೆ.

icgs shoor

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian Coast Guard ship ICGS Shoor now on New Mangaluru port. The ship was commissioned by Nitin Jairam Gadkari, union shipping minister at Goa on April 11, 2016. The ship will be berthed at New Mangalore port trust.
Please Wait while comments are loading...