ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಡ್ಡ ಕುಸಿದ ಜೋಡುಪಾಳದಲ್ಲಿ ಇಂದೂ ರಕ್ಷಣಾ ಕಾರ್ಯ

|
Google Oneindia Kannada News

ಮಂಗಳೂರು, ಆಗಸ್ಟ್ 19 : ಭಾರೀ ಮಳೆ ಸೃಷ್ಟಿಸಿದ ಅನಾಹುತ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಕೊಡಗಿನ ಜೋಡುಪಾಳದಲ್ಲಿ ಸಂಭವಿಸಿದ ಗುಡ್ಡಕುಸಿತ ಪ್ರದೇಶದಲ್ಲಿ ರಕ್ಷಣಾಕಾರ್ಯ ಇಂದೂ ಕೂಡ ಮುಂದುವರೆಯಲಿದೆ. ದುರಂತದಲ್ಲಿ ಮಣ್ಣಿನಡಿಗೆ ಸಿಲುಕಿರುವವರ ಶೋಧಕಾರ್ಯವನ್ನು ಎನ್‌ಡಿಆರ್‌ಎಫ್‌ ತಂಡ ಮುಂದುವರೆಸಿದೆ

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಬಳಿಕ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿಗೂ ಸಂಕಷ್ಟ ಎದುರಾಗಿದೆ. ಬಿಸ್ಲೆ ಘಾಟ್ ಮೇಲೆ‌ ಕೂಡ ಗುಡ್ಡ ಕುಸಿತ ಉಂಟಾಗಿದೆ. ಭಾರೀ ಮಳೆಯಿಂದ ಬಿಸ್ಲೆ ಘಾಟಿ ಮೇಲಿಂದ ಹರಿದು ಬಂದ ನೀರಿನ ರಭಸಕ್ಕೆ ನೂರಾರು ಬೃಹತ್ ಮರಗಳು ಕೊಚ್ಚಿ ಕೊಂಡು ಹೋಗಿದೆ.

ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗದಲ್ಲಿ 17 ಕಡೆ ಗುಡ್ಡ ಕುಸಿತಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗದಲ್ಲಿ 17 ಕಡೆ ಗುಡ್ಡ ಕುಸಿತ

ಬಿಸ್ಲೆ ಘಾಟ್‌ನ ಬಾಗಿಮಲೆಬೆಟ್ಟ ಅರಣ್ಯದಿಂದ ನೂರಾರು ಬೃಹತ್ ಮರಗಳು ಕೊಚ್ಚಿಕೊಂಡು ಬಂದು ತರಗೆಲೆಗಳಂತೆ ಬಂದು ರಸ್ತೆಗೆ ಬಂದು ಬಿದ್ದಿವೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ನಾಶವಾಗಿದೆ.

NDRF to continue rescue operations in Dakshina Kannada

ಕರಾವಳಿಯಲ್ಲಿ ಪ್ರವಾಹಕ್ಕೆ ಮಾನವನ ಹಸ್ತಕ್ಷೇಪ ಕಾರಣವೇ?ಕರಾವಳಿಯಲ್ಲಿ ಪ್ರವಾಹಕ್ಕೆ ಮಾನವನ ಹಸ್ತಕ್ಷೇಪ ಕಾರಣವೇ?

ಇತ್ತೀಚೆಗಷ್ಟೇ ಇಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ, ಅತಿವೃಷ್ಟಿಯಿಂದ ಸಂಭವಿಸಿದ ಜಲಪ್ರಳಯಕ್ಕೆ ಬಿಸ್ಲೆ ಘಾಟ್ ರಸ್ತೆ ಸಂಪೂರ್ಣ ನಾಶ ವಾಗಿದೆ. ಸುಬ್ರಹ್ಮಣ್ಯದಿಂದ ಸಕಲೇಶಪುರ ಸಂಪರ್ಕಿಸುವ ಬಿಸ್ಲೆ ಘಾಟ್ ರಸ್ತೆ ಇದಾಗಿದೆ.

English summary
National Disaster Response Force (NDRF) team to continue rescue operations in Dakshina Kannada district Jodupala, where landslide due to heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X