ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ.4ರಿಂದ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಕರಾಟೆ ಟೂರ್ನಿ ಆರಂಭ

|
Google Oneindia Kannada News

ಮಂಗಳೂರು, ನವೆಂಬರ್ 03 : ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಸ್ಪರ್ಧೆ ನಾಳೆಯಿಂದ (ನವೆಂಬರ್ 04) ಮಂಗಳೂರಿನಲ್ಲಿ ಆರಂಭವಾಗಲಿದೆ. ಎರಡು ದಿನಗಳ ಕಾಲ ನಡೆಯುವ ಈ ಸ್ಪರ್ಧೆಗೆ ಸರ್ವಸಿದ್ಧತೆ ಪೂರ್ಣಗೊಂಡಿದೆ.

ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ 'ಇಂಡಿಯನ್ ಕರಾಟೆ ಚಾಂಪಿಯನ್ ಶಿಪ್ 2017 ' ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ.

National Level Free Karate championship will begin in Mangaluru on Nov 4th

ರಾಷ್ಟ್ರ ಮಟ್ಟದ ಈ ಕರಾಟೆ ಟೂರ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ .ಪುರುಷರು ಹಾಗೂ ಮಹಿಳಾ ವಿಭಾಗಗಳಲ್ಲಿ ಈ ಪಂದ್ಯಾಟಗಳು ನಡೆಯಲಿದ್ದು, ದೇಶದ 12ಕ್ಕೂ ಅಧಿಕ ರಾಜ್ಯಗಳಿಂದ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ .

104ಕ್ಕೂ ಅಧಿಕ ರಾಜ್ಯ ಅಧಿಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ 1200ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿ 4 ಫೈಟ್ ರಿಂಗ್ ಗಳನ್ನು ನಿರ್ಮಿಸಲಾಗಿದೆ.

National Level Free Karate championship will begin in Mangaluru on Nov 4th

ಟೀಮ್ ಕಟಾ, ಟೀಮ್ ಕುಮಿಟೆ ,ವೈಯಕ್ತಿಕ ಕಟಾ ,ಗ್ರೂಪ್ ಚಾಂಪಿಯನ್ ವಿಭಾಗಗಳ ಸಹಿತ ಹಲವು ವಿಭಾಗಗಳಲ್ಲಿ ಸ್ಪರ್ದೆಗಳು ನಡೆಯಲಿದೆ. ಮಲೇಷ್ಯಾದಿಂದ ಬಂದಿರುವ ಸಿನಾನ್ ವಸಂತನ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

English summary
Self Defense School of Indian Karate Dojo organized National Karate championship 2017 at Nehru Maidan Mangaluru, on November 4th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X