ಮಂಗಳೂರಲ್ಲಿ ಮಾ.25ರಿಂದ ಕಲಕುಶಲ ವಸ್ತುಗಳ ಪ್ರದರ್ಶನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 23 : ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡಲು ಮಂಗಳೂರಿನಲ್ಲಿ ರಾಷ್ಟ್ರೀಯ ಕ್ರಾಫ್ಟ್‌ ಬಜಾರ್‌ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಲು ಮಂಗಳೂರು ನಗರಕ್ಕೆ ಅವಕಾಶ ಸಿಕ್ಕಿದೆ.

'ಕೇಂದ್ರ ಜವಳಿ ಇಲಾಖೆ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಭಾಗಿತ್ವದಲ್ಲಿ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ ನಲ್ಲಿ ಮಾ. 25ರಿಂದ ಏ. 3ರವರೆಗೆ ರಾಷ್ಟ್ರೀಯ ಕ್ರಾಫ್ಟ್‌ ಬಜಾರ್‌ ಆಯೋಜನೆ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. [ಮಂಗಳೂರಿಗೆ ಸ್ವಾಗತ ಕೋರುತ್ತಿದ್ದ ಕಲಶ ಸ್ಥಳಾಂತರ]

mangaluru

ಮೇಳದಲ್ಲಿ ಪತ್ರಿದಿನ ಬೆಳಗ್ಗೆ 11ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪಿಲಿಕುಳದಲ್ಲಿ ಇದೆ ಮೊದಲ ಬಾರಿಗೆ ಕ್ರಾಫ್ಟ್ ಬಾಜಾರ್ ನಡೆಸಲು ಅವಕಾಶ ದೊರೆತಿದೆ. ಮುಂದೆ ಗಾಂಧಿ ಶಿಲ್ಪ ಬಾಜಾರ್ ಆಯೋಜನೆ ಮಾಡಲು ಅವಕಾಶ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. [ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ]

ಕ್ರಾಫ್ಟ್ ಬಜಾರ್ ಆಯೋಜನೆ ಮಾಡುವುದರಿಂದ ಕರಕುಶಲಕರ್ಮಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಅಲ್ಲದೆ, ಕರಕುಶಲ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿದಂತಾಗುತ್ತದೆ. ಈ ಪ್ರದರ್ಶನದಲ್ಲಿ ತಿರುಪತಿ, ಮೈಸೂರು, ಧಾರವಾಡ, ತಮಿಳುನಾಡು, ಕೇರಳ, ನಾಗಾಲ್ಯಾಂಡ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ 100 ಕ್ಕೂ ಹೆಚ್ಚು ಕರಕುಶಲಕರ್ಮಿಗಳ ತಂಡಗಳು ಭಾಗವಹಿಸಲಿವೆ.

ಮೇಳದಲ್ಲಿ ಬಿದಿರಿನ ಕರಕುಶಲ ವಸ್ತುಗಳು, ಪೀಠೋಪಕರಣಗಳು, ಕರಕುಶಲ ಸೀರೆಗಳು, ವಸ್ತ್ರಗಳು, ಲೋಹಗಳಿಂದ ಮಾಡಿದ ಕರಕುಶಲ ವಸ್ತುಗಳು, ಸೆಣಬಿನ ವಿವಿಧ ಕಲಾ ಪ್ರಕಾರಗಳು, ಚರ್ಮದ ವಸ್ತುಗಳು ಸೇರಿದಂತೆ ನಾನಾ ರೀತಿಯ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada Deputy Commissioner A.B.Ibrahim said, National level craft bazaar organized at Dr. Shivarama Karantha Pilikula Nisargadhama from March 25 to April 3, 2016.
Please Wait while comments are loading...