ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾಳ ಹಾಕಿ ಮೀನು ಹಿಡಿಯಲು ಮಂಗಳೂರಿಗೆ ಬನ್ನಿ

|
Google Oneindia Kannada News

ಮಂಗಳೂರು : ಕೆರೆ ,ತೋಡು,ತೊರೆ , ನದಿಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವ ಉತ್ಸಹ , ರೋಮಾಂಚನವೇ ಬೇರೆ. ಹಳ್ಳ ,ಬಾವಿ, ಕೆರೆಗಳ ಬದಿಯಲ್ಲಿ ಕೈಯಲ್ಲಿ ಗಾಳ ಹಿಡಿದು ಮೀನು ಹಿಡಿಯುವ ಪರಿಪಾಠ ಕರಾವಳಿಯಲ್ಲಿ ಸರ್ವೇ ಸಾಮಾನ್ಯ . ಗಾಳ ಹಾಕಿ ಮೀನು ಹಿಡಿಯುವ ದೃಶ್ಯ ಗ್ರಾಮೀಣ ಪ್ರದೇಶದಲ್ಲಿ ಸರ್ವೇ ಸಾಮಾನ್ಯವಾಗಿದ್ದರೂ ಇತ್ತೀಚೆಗೆ ನಗರ ಪ್ರದೇಶಕ್ಕೂ ವ್ಯಾಪಿಸುತ್ತಿದೆ .

ಗಾಳ ಹಾಕಿ ಮೀನು ಹೊಡೆಯುವ ಪ್ರಕ್ರಿಯೆಗೆ ಈಗ ಒಂದು ಕ್ರೀಡೆಯ ರೂಪ ನೀಡಲಾಗಿದೆ . ಈ ಗಾಳ ಹಾಕಿ ಮೀನು ಹಿಡಿಯುವ ಕ್ರೀಡೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರಿ ಮನ್ನಣೆಯಿದೆ ಮತ್ತು ಬಾರಿ ಜನಪ್ರಿಯ ಕ್ರೀಡೆ ಕೂಡ . ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಈ ಕ್ರೀಡೆ ಈಗ ರಾಜ್ಯದ ಕರಾವಳಿಗೆ ಕಾಲಿರಿಸಿದೆ. ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪರ್ಧೆ "ಆ್ಯಂಗ್ಲಿಂಗ್ ಕಾರ್ನಿವಲ್ " ಆಯೋಜಿಸಲಾಗುತ್ತಿದೆ.

 National Level Competition Angling Carnival organised in Mangaluru

ಇದೇ ಬರುವ ಡಿಸೆಂಬರ್ 24 ಹಾಗು 25 ರಂದು ಮಂಗಳೂರು ಹೊರವಲಯದ ಪಣಂಬೂರು ಕಡಲ ತೀರ ಮತ್ತು ಎನ್ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪರ್ಧೆ ಆ್ಯಂಗ್ಲಿಂಗ್ ಕಾರ್ನಿವಲ್ ಆಯೋಜಿಸಲಾಗಿದೆ.

ಸಮುದ್ರದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಅವಕಾಶ ಕಲ್ಪಿಸುವ ಸಲುವಾಗಿ ಗಿಫ್ಟೆಡ್ ಇಂಡಿಯಾ ಸಂಸ್ಥೆಯು ಎನ್ಎಂಪಿಟಿ ಮಂಗಳೂರು ಹಾಗೂ ಪಣಂಬೂರು ಬೀಚ್ ಸಹಯೋಗದಲ್ಲಿ ಈ ಗಾಳ ಹಾಕುವ ಉತ್ಸವವನ್ನು ಆಯೋಜಿಸಿದೆ . ಈ ಗಾಳ ಹಾಕುವ ಸ್ಪರ್ಧೆಯಲ್ಲಿ ಅಧಿಕ ತೂಕದ ಮೀನನ್ನು ಗಾಳದಲ್ಲಿ ಹಿಡಿದವರಿಗೆ ಹಾಗೂ ಅತಿ ಹೆಚ್ಚು ಸಂಖ್ಯೆಯ ಮೀನುಗಳನ್ನು ಹಿಡಿದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ .

 National Level Competition Angling Carnival organised in Mangaluru

ಅಧಿಕ ತೂಕದ ಮೀನು ಹಿಡಿದವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ 25 ಸಾವಿರ ರೂಪಾಯಿ ಹಾಗೂ ಅಧಿಕ ಸಂಖ್ಯೆಯ ಮೀನು ಹಿಡಿದವರಿಗೆ ಪ್ರಥಮ ಬಹುಮಾನ 10 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 5 ಸಾವಿರ ರೂಪಾಯಿ ನೀಡಲು ಆಯೋಜಕರು ನಿರ್ಧರಿಸಿದ್ದಾರೆ .

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಉಪಯೋಗಿಸುವ ಗಾಳದಿಂದ ಮೀನಿಗೆ ಯಾವುದೇ ರೀತಿಯಲ್ಲಿ ಅಪಾಯವಾಗದಂತೆ ಎಚ್ಚರಿಕೆ ವಹಿಸುವ ನಿಯಮವಿದೆ . ಇದಕ್ಕೆ ಕಾರಣವೂ ಇದೆ ಸ್ಪರ್ಧೆಯ ಸಂದರ್ಭದಲ್ಲಿ ಹಿಡಿದ ಮೀನಿನ ಪ್ರಮಾಣ ಹಾಗೂ ತೂಕ ಅಳೆದ ಬಳಿಕ ಅಷ್ಟೇ ಸುರಕ್ಷಿತವಾಗಿ ಆ ಮೀನುಗಳನ್ನು ಮತ್ತೆ ಸಮುದ್ರಕ್ಕೆ ಬಿಡುವ ಕಾರ್ಯ ನಡೆಯಲಿದೆ.

ಈ ಗಾಳ ಹಾಕುವ ಉತ್ಸವದಲ್ಲಿ ದೇಶದ ಇತರ ರಾಜ್ಯಗಳ ಸ್ಪರ್ಧಾಳುಗಳು ಸೇರಿದಂತೆ ವಿದೇಶಿ ಆ್ಯಂಗ್ಲರ್ ಗಳು ಕೂಡ ಭಾಗವಹಿಸಲಿದ್ದಾರೆ.

English summary
National Level Competition Angling Carnival organised in Mangalore . This will be held on December 24 and 25 at the Panambur Beach and NMPT Brake Water in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X