ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರೇಂದ್ರ ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29 : ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಧರ್ಮಸ್ಥಳದ ಉಜಿರೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Live : ಉಜಿರೆಗೆ ಆಗಮಿಸಿದ ನರೇಂದ್ರ ಮೋದಿLive : ಉಜಿರೆಗೆ ಆಗಮಿಸಿದ ನರೇಂದ್ರ ಮೋದಿ

ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿನ ಬೃಹತ್ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ 'ರೂಪೆ ಕಾರ್ಡ್' ವಿತರಿಸಿದರು. ಇದು ಸ್ವ ಸಹಾಯ ಗುಂಪುಗಳಿಗೆ ನಗದು ರಹಿತ ಡಿಜಿಟಲ್ ವಹಿವಾಟು ನಡೆಸಲು ಅವಕಾಶ ನೀಡುತ್ತದೆ.

In Pics : ಧರ್ಮಸ್ಥಳದಲ್ಲಿ ನರೇಂದ್ರ ಮೋದಿ

Narendra Modi address public meeting in Ujire, Dharmasthala

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಶಾಲು ಹೊದಿಸಿ, ಸರಸ್ವತಿ ವಿಗ್ರಹ ನೀಡಿ ಮೋದಿ ಅವರನ್ನು ಸನ್ಮಾನಿಸಿದರು. ಧರ್ಮಾಧಿಕಾರಿಯಾಗಿ 50 ವರ್ಷ ಪೂರ್ಣಗೊಳಿಸಿದ ವೀರೇಂದ್ರ ಹೆಗ್ಗಡೆ ಅವರನ್ನು ಮೋದಿ ಸನ್ಮಾನಿಸಿದರು.

ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ

ಮೋದಿ ಭಾಷಣದ ಮುಖ್ಯಾಂಶಗಳು

* ನಮೋ ಮಂಜುನಾಥ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ

* ಕಳೆದ ವಾರ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಕೇದಾರನಾಥಕ್ಕೆ ಭೇಟಿ ನೀಡಿದ್ದೆ. ಈ ಬಾರಿ ದಕ್ಷಿಣದ ಮಂಜುನಾಥನ ದರ್ಶನ ಮಾಡುವ ಅವಕಾಶ ಸಿಕ್ಕಿದೆ. ಇದು ನನ್ನ ಸೌಭಾಗ್ಯ

* ಹೆಗ್ಗಡೆ ಅವರಂಥಹ ವ್ಯಕ್ತಿಯ ಮುಂದೆ ನಾನು ತುಂಬಾ ಚಿಕ್ಕವನು. ಅವರನ್ನು ಸನ್ಮಾನಿಸುವ ಅರ್ಹತೆ ನನಗಿದೆಯೇ?

ಧರ್ಮಸ್ಥಳದಲ್ಲಿ ನಗದು ರಹಿತ ಪಾವತಿ ಸೌಲಭ್ಯಧರ್ಮಸ್ಥಳದಲ್ಲಿ ನಗದು ರಹಿತ ಪಾವತಿ ಸೌಲಭ್ಯ

* ವೀರೇಂದ್ರ ಹೆಗ್ಗಡೆ ಅವರನ್ನು ನಾನು ಹಲವು ಬಾರಿ ಭೇಟಿ ಮಾಡಿದ್ದೇನೆ ಅವರ ಮುಖದಲ್ಲಿನ ನಗು ಹಾಗೆಯೇ ಇದೆ. ಒಂದು ಧಾರ್ಮಿಕ ಕ್ಷೇತ್ರ ಹೇಗಿರಬೇಕು? ಎಂಬುದಕ್ಕೆ ಧರ್ಮಸ್ಥಳ ಮಾದರಿಯಾಗಿದೆ

ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕನ್ನಡ ಡಿಂಡಿಮಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಕನ್ನಡ ಡಿಂಡಿಮ

* ಡಾ.ವೀರೇಂದ್ರ ಹೆಗ್ಗಡೆ ಅವರು ಬಡವರ, ಮಹಿಳೆಯರ ಅಭಿವೃದ್ಧಿ ಮಾಡಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಆದರ್ಶ ಪ್ರಾಯ

* ದೇಶದ ತುಂಬಾ ನಡೆಯುತ್ತಿರುವ ಕೌಶಾಲ್ಯಾಭಿವೃದ್ಧಿ ಕಾರ್ಯಗಳಿಗೆ ಧರ್ಮಸ್ಥಳ ಸ್ಫೂರ್ತಿಯಾಗಿದೆ.

* ಜನಪರ ಕಾರ್ಯಗಳನ್ನು ಅನುಷ್ಠಾನ ಮಾಡುವುದನ್ನು ಹೆಗ್ಗಡೆ ಅವರಿಂದ ಕಲಿಯಬೇಕು ಎಂದು ಹೇಳಿದ ಮೋದಿ ಹೆಗ್ಗಡೆ ಅವರ ಕಾರ್ಯಗಳನ್ನು ಶ್ಲಾಘಿಸಿದರು.

* ಗ್ರಾಮೀಣ ವಿಕಾಸ ಯೋಜನೆಗಳು, ಬಡವರು ಮತ್ತು ಮಹಿಳೆಯರ ಅಭಿವೃದ್ಧಿಗೆ ವೀರೇಂದ್ರ ಹೆಗ್ಗಡೆ ಅವರು ಮಾಡಿರುವ ಕಾರ್ಯಗಳು ಆದರ್ಶವಾಗಿವೆ.

* ವೀರೇಂದ್ರ ಹೆಗ್ಗಡೆ ಅವರು ಧರ್ಮಾಧಿಕಾರಿಗಳಾಗಿ 50 ವರ್ಷ ಪೂರೈಸಿದ್ದಾರೆ. ಅವರ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ನಾನು ನಮನ ಸಲ್ಲಿಸುತ್ತೇನೆ.

* ನಗದು ರಹಿತ ವ್ಯವಹಾರಕ್ಕೆ ಜನರು ಮುಂದಾಗಬೇಕು. ಧರ್ಮಸ್ಥಳದಲ್ಲಿ ಆರಂಭವಾದ ಯೋಜನೆಗಳು ಹಳ್ಳಿ-ಹಳ್ಳಿಗೆ ತಲುಪಿವೆ

* ಈ ಕ್ಷೇತ್ರದಲ್ಲಿ ನಾವು ಪರಿಸರ ಸಂರಕ್ಷಣೆ ಮಾಡೋಣ, ನೀರನ್ನು ಉಳಿಸೋಣ ಎಂದು ಸಂಕಲ್ಪ ಮಾಡೋಣ.

* ಕ್ಯಾಶ್ ಲೆಸ್ ಯೋಜನೆಯನ್ನು ಹಲವರು ಪ್ರಶ್ನಿಸಿದರು. ನೋಟು ನಿಷೇಧದ ಬಗ್ಗೆ ಟೀಕೆ ಮಾಡಿದರು. ನಾವು ಮುಂದಿನ ಪೀಳಿಗೆಯ ಬಗ್ಗೆ ಆಲೋಚನೆ ಮಾಡಿ ಯೋಜನೆಯನ್ನು ಜಾರಿಗೆ ತಂದೆವು

ಮೋದಿ ಭಾಷಣದ ವಿಡಿಯೋ ನೋಡಿ

English summary
PM Narendra Modi in Karnataka, on October 29, 2017 he adressed public meeting in Ujire, Dharmasthala, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X