ಬಾಲಿವುಡ್ ನಟ ನಾನಾ ಪಾಟೇಕರ್ ಮಂಗಳೂರಿಗೆ ಬಂದಿದ್ದೇಕೆ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 12: ಮಂಗಳೂರಿನ ರಾಮಕೃಷ್ಣ ಮಠ ನಗರದಲ್ಲಿ ಹಮ್ಮಿಕೊಂಡಿದ್ದ 'ಸ್ವಚ್ಛ ಭಾರತ್ ಜಾಗೃತಿ ಜಾಥಾ'ಕ್ಕೆ ಜನಪ್ರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು'ನಮ್ಮ ಮನಸ್ಸು ಸಕಾರಾತ್ಮಕ ಯೋಚನೆ ಮಾಡುತ್ತಿದ್ದರೆ ನಮ್ಮ ಸುತ್ತ- ಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತೆ' ಎಂದು ಅಭಿಪ್ರಾಯಪಟ್ಟಿದ್ದಾರೆ. [ಬಂಧಿತ ಶಾರ್ಪ್ ಶೂಟರ್ಸ್ ಗಳಿಂದ ಶ್ರೀರಾಮ ಸೇನೆ ಮುಖ್ಯಸ್ಥನ ಹತ್ಯೆಗೆ ಸಂಚು?]

Nana Patekar inaugurated Swachh Bharat campaign at Mangaluru

ಹಂಪನಕಟ್ಟೆಯಲ್ಲಿ ಆರಂಭಗೊಂಡ ಜಾಥಾಕ್ಕೆ ರಸ್ತೆ ಬದಿಯ ಕಂಪೌಂಡ್ ಗೋಡೆಯಲ್ಲಿನ ಮನುಷ್ಯನ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಅವರು ಚಾಲನೆ ನೀಡಿದರು. 'ಸ್ವಚ್ಛತೆ ಕಾಪಾಡುವುದು ನಮ್ಮ ಜವಾಬ್ದಾರಿ. ಆದರೆ ಇಂದು ಸ್ವಚ್ಛತೆಗಾಗಿ ಅಭಿಯಾನ ನಡೆಸುವ ಪರಿಸ್ಥಿತಿ ಬಂದಿರುವುದು ಖೇದಕರ' ಎಂದರು. [ಮಂಗಳೂರು: ಧರಣಿ ನಿರತರ ಬಂಧನ; ಅನಿರ್ಧಿಷ್ಟಾವಧಿ ಜಿಲ್ಲಾ ಬಂದ್‌ಗೆ ಕರೆ]

Nana Patekar inaugurated Swachh Bharat campaign at Mangaluru

ಬಳಿಕ ರಾಮಕೃಷ್ಣ ಮಠದ ಸ್ವಾಮೀಜಿಗಳೊಂದಿಗೆ ಜಾಥಾದಲ್ಲಿ ಒಂದಿಷ್ಟು ದೂರ ನಾನಾ ಕೂಡಾ ಹೆಜ್ಜೆ ಹಾಕಿದರು. ಈ ವೇಳೆ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Renowned Bollywood Actor Nana patekar inaugurated Swachh Bharat campaign organized by Ramakrishna Matt at Mangaluru today (February 12).
Please Wait while comments are loading...