ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮೋ ಬ್ರಿಗೇಡ್ ಇನ್ನು ಯುವ ಬ್ರಿಗೇಡ್

|
Google Oneindia Kannada News

ಮಂಗಳೂರು, ಮೇ 29 : ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕೆಂಬ ಏಕೈಕ ಉದ್ದೇಶದಿಂದ ಆರಂಭಗೊಂಡಿದ್ದ 'ನಮೋ ಬ್ರಿಗೇಡ್‌' ಈಗ 'ಯುವ ಬ್ರಿಗೇಡ್‌' ಆಗಿ ಪರಿವರ್ತನೆಯಾಗಿದೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಮೋ ಬ್ರಿಗೇಡ್ ವಿಸರ್ಜನೆಗೊಂಡಿದೆ.

ಮಂಗಳೂರಿನ ಉದ್ಯಮಿ ನರೇಶ್‌ ಶೆಣೈ ಅವರ ಕನಸಿನ ಕೂಸಾದ ನಮೋ ಬ್ರಿಗೇಡ್‌. 2013ರ ಜುಲೈ 14ರಂದು ಬೆಂಗಳೂರಿನಲ್ಲಿ ಆರಂಭಗೊಂಡಿತ್ತು. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಈ ಸಂಘಟನೆ ಹುಟ್ಟುಹಾಕಲಾಗಿತ್ತು. ಸದ್ಯ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ನಮೋ ಬ್ರಿಗೇಡ್ ವಿಸರ್ಜನೆಗೊಂಡಿದೆ. [ನಮೋ ಬ್ರಿಗೇಡ್ ಬೆಳೆದಿದ್ದು ಹೇಗೆ?]

Namo Brigade

ನಮೋ ಬ್ರಿಗೇಡ್‌ ಕರ್ನಾಟಕದಲ್ಲಿ 300 ಘಟಕಗಳನ್ನು ಹೊಂದಿದೆ. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದ್ದ ಬಿಗ್ರೇಡ್ ನಲ್ಲಿ 10,000 ಸಕ್ರಿಯ ಕಾರ್ಯಕರ್ತರಿದ್ದು, 15 ಲಕ್ಷ ಹಿತೈಷಿಗಳಿದ್ದರು. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯ ಸಂದರ್ಭದಲ್ಲಿ ಬ್ರಿಗೇಡ್ ಮೋದಿ ಪರವಾಗಿ 1,500 ಸಮಾವೇಶಗಳನ್ನು ಆಯೋಜಿಸಿತ್ತು. [ಮಂಗಳೂರಿನಲ್ಲಿ ನಮೋ ಬ್ರಿಗೇಡ್ ಉದ್ಘಾಟನೆ]

ನಮೋ ಬ್ರಿಗೇಡ್‌ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡವರು 1.30 ಲಕ್ಷ ಕಿ.ಮೀ. ಪ್ರಯಾಣ ಮಾಡಿ ಮೋದಿ ಅವರ ಸಂದೇಶಗಳನ್ನು ಜನರಿಗೆ ತಲುಪಿಸಿದ್ದಾರೆ. ನಮೋ ಬ್ರಿಗೇಡ್‌ ಸ್ಟಾರ್‌ ಪ್ರಚಾರಕರಾಗಿದ್ದ ಚಕ್ರವರ್ತಿ ಸೂಲಿಬೆಲೆ 60,000 ಕಿ.ಮೀ. ಪ್ರವಾಸ ಮಾಡಿ ಮೋದಿ ಪರ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ.

ನಮೋ ಬ್ರಿಗೇಡ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಚಕ್ರವರ್ತಿ ಸೂಲಿಬಲೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಬ್ರಿಗೇಡ್ ಅನ್ನು ವಿಸರ್ಜಿಸಲಾಗಿದೆ. ನಮೋ ಬ್ರಿಗೇಡ್ ನಲ್ಲಿರುವ ಯುವಕರು ಇನ್ನು ಮುಂದೆ ಯವ ಬ್ರಿಗೇಡ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

English summary
After Narendra Modi takes oath as Prime Minister of India, ‘Namo Brigade’ which was formed with the aim of making Modi the PM, will be dissolved as the mission has been completed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X